ಪಕ್ಷದ ಅಭ್ಯರ್ಥಿಗಳಿಗೆ ಲಿಂಗಾಯತರು ಸಪೋರ್ಟ್ ಮಾಡ್ತಾರೆ: ಪ್ರದೀಪ್ ಶೆಟ್ಟರ್

ಹುಬ್ಬಳ್ಳಿ: ಈಗಾಗಲೇ ಧಾರವಾಡ ಲೋಕಸಭೆಯಿಂದ ಪ್ರಲ್ಹಾದ್ ಜೋಶಿಯವರು ಮೂರು ಬಾರಿ ಆಯ್ಕೆಯಾಗಿದ್ದಾರೆ. ಲಿಂಗಾಯತ ಧರ್ಮದವರು ಮೂರು ಭಾರಿ ಚುನಾವಣೆಯಲ್ಲಿ ಅವರನ್ನು ಹಾರೈಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಈ ಬಾರಿಯು ಹೆಚ್ಚು ಸಂಖ್ಯೆಯಲ್ಲಿ ‌ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ವೀರಶೈವ ಹಾಗೂ ಲಿಂಗಾಯತರು ಸಪೋರ್ಟ್ ಮಾಡುತ್ತಾರೆ. ವೀರಶೈವ ಲಿಂಗಾಯತರು ತುಂಬಾ ಜನರಿದ್ದಾರೆ. ಕಾಂಗ್ರೆಸ್ ಪಕ್ಷದ ಲಿಂಗಾಯತ ಮುಖಂಡರಾದ ವಿನಯ ಕುಲಕರ್ಣಿ ಸ್ಪರ್ಧೆ ಮಾಡಿದ್ದರು. ಆದ್ರೂ ಮೂರು ಬಾರಿ ಜೋಶಿಯವರಿಗೆ ವೀರಶೈವ ಲಿಂಗಾಯತರು ಆಯ್ಕೆ ಮಾಡಿದ್ದಾರೆ. ಲಿಂಗಾಯತ ಹಾಗೂ ವೀರಶೈವ ಸಮುದಾಯದವರು ಶೇ 90% ಬಿಜೆಪಿಗೆ ಮತ ನೀಡುತ್ತಾರೆ. ವಿನಯ ಕುಲಕರ್ಣಿಯವರು ವೀರಶೈವ ಲಿಂಗಾಯತರು ಅಂದುಕೊಂಡು ಮುಂದುವರೆದರೆ ಬಹಳ‌ ಒಳ್ಳೆಯದು. ರಾಜ್ಯಾದ್ಯಂತ ವೀರಶೈವ ಲಿಂಗಾಯತರು ಬಿಜೆಪಿಗೆ ಮತ ಹಾಕುತ್ತಾರೆ. ಇದರ ರೀಸಲ್ಟ್ ಮೇ 24ಕ್ಕೆ ತಿಳಿಯುತ್ತೆ ಎಂದು ಪ್ರದೀಪ್ ಶೆಟ್ಟರ್ ಹೇಳಿದರು.

ಹಾಸನದಲ್ಲಿ ಎ.ಮಂಜು ಸ್ಪರ್ಧೆ ಮಾಡಿದ್ದಾರೆ. 3 ಲಕ್ಷ 70 ಸಾವಿರ ವೀರಶೈವ ಲಿಂಗಾಯತ ಓಟ್ ಇವೆ. ಶೇ 90ರಷ್ಟು ಮತದಾರರು ಅಲ್ಲಿ ಬಿಜೆಪಿಗೆ ಮತ ಹಾಕುತ್ತಾರೆ. ನಾವು ಈ ಹಿಂದೆಯು ಅಟಲ್ ಜೀ ಹೆಸರು ಹೇಳಿ‌ಮತ ಕೇಳಿದ್ದೇವೆ ಅಡ್ವಾಣಿಯವರು ಇದ್ದಾಗ ಅವರ ಹೆಸರು ಹೇಳುತ್ತಿದ್ವಿ. ಪ್ರಧಾನಿ ಕ್ಯಾಂಡಿಡೆಟ್ ಹೆಸರು‌ ಹೇಳಿ ನಾವು ಈ ಹಿಂದಿನಿಂದಲೂ ಮತ ಕೇಳಿದ್ದೇವೆ. ಈ ಬಾರಿಯು ಮೋದಿಯವರ ಹೆಸರ ಹೇಳಿ ಮತ ಕೇಳುತ್ತಿದ್ದೇವೆ ಎಂದು ಪ್ರದೀಪ್ ಶೆಟ್ಟರ ಹೇಳಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv