ಜನರಿಗೆ ಹೆಂಡ ಕುಡ್ಸಿ ಸರ್ಕಾರ ಬೊಕ್ಕಸ ತುಂಬಿಸಿಕೊಳ್ತಿದೆ: ಕಾಗೇರಿ

ಶಿರಸಿ: ಸಾರ್ವಜನಿಕರಿಗೆ ಹೆಂಡ ಕುಡಿಸಿ ಸರ್ಕಾರ ಬೊಕ್ಕಸ ತುಂಬಲು ಹೊರಟಿದೆ. ಸರ್ಕಾರದ ಬಳಿ ಹಣ ಇಲ್ಲವಾದ್ರೆ ಅಧಿಕಾರ ಬಿಟ್ಟು ಹೋಗಲಿ. ಇದು ನಿಶ್ಚಿತವಾಗಿ ಸರ್ಕಾರಕ್ಕೆ ಶಾಪವಾಗಿ ಪರಿಣಮಿಸುತ್ತೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಕಿಡಿಕಾರಿದ್ದಾರೆ.
ಶಿರಸಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್-ಜೆಡಿಎಸ್ ಸರ್ಕಾರ ಎಲ್ಲೆಂದರಲ್ಲಿ ಮದ್ಯದ ಅಂಗಡಿಗಳನ್ನ ತೆರೆಯಲು ಹೊರಟಿದೆ. ರಾಜ್ಯದಲ್ಲಿ ಸಾವಿರಾರು ಕಡೆ ಮದ್ಯದಂಗಡಿ ತೆರೆಯಲು ಸರ್ಕಾರ ಮುಂದಾಗಿದೆ ಎಂದರು. ಮಾಜಿ ಸಿಎಂ ಸಿದ್ದರಾಮಯ್ಯ ಮದ್ಯದಂಗಡಿ ತೆರೆದು ಹಣ ಸಂಗ್ರಹಕ್ಕೆ ಮುಂದಾಗಿದ್ದರು.

ಇದೀಗ ಸಿಎಂ ಕುಮಾರಸ್ವಾಮಿ ಅದೇ ದಾರಿಯಲ್ಲಿ ಹೋಗ್ತಿದ್ದಾರೆ. ಸರ್ಕಾರ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದೆ. ಅಲ್ಲದೆ ಸಮಾಜದ ಸ್ವಾಸ್ಥ್ಯವನ್ನ ಕೆಡಿಸುತ್ತಿದೆ. ಮದ್ಯದಂಗಡಿ ತೆರೆಯದಂತೆ ನನ್ನ ಕ್ಷೇತ್ರದಲ್ಲಿ ಹಲವು ಕಡೆ ಪ್ರತಿಭಟನೆ ಆಗಿದೆ. ಪ್ರತಿಭಟನೆಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಅವರು ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv