‘ನಮಗೆ ಗೆಲ್ಸೋದೂ.. ಸೋಲ್ಸೋದು ಗೊತ್ತು’ :ತೇಜಸ್ವಿ ಸೂರ್ಯಗೆ ಸೋಮಣ್ಣ ಕ್ಲಾಸ್​

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ವಿ‌. ಸೋಮಣ್ಣ ಕ್ಲಾಸ್ ತೆಗೆದುಕೊಂಡಿದ್ದಾರೆ. ಲೋಕಸಭಾ ಕ್ಷೇತ್ರದ ಪ್ರಚಾರದ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ನಡೆದುಕೊಂಡ ರೀತಿಯಿಂದ ಬೇಸರಗೊಂಡಿರುವ ವಿ.ಸೋಮಣ್ಣ, ಲೋಕಸಭೆಗೆ ಪ್ರವೇಶಿಸಲು ಬೇಕಾಗಿರುವ ಅರ್ಹತೆ, ಸಾರ್ವಜನಿಕ ಬದುಕು ಸೇರಿದಂತೆ, ಸಮಾಜದಲ್ಲಿ ಹೇಗಿರಬೇಕು ಎಂಬುದರ ಬಗ್ಗೆ ಪಾಠ ಮಾಡಿದ್ದಾರೆ.

ಮತದಾನ ದಿನದ ಬಳಿಕ ವಿ.ಸೋಮಣ್ಣ, ತೇಜಸ್ವಿ ಸೂರ್ಯ ಅವರನ್ನು ಮನೆಗೆ ಉಪಹಾರ ಕೂಟಕ್ಕೆ ಆಹ್ವಾನಿಸಿದ್ದಾರೆ. ಸೂರ್ಯ ಜೊತೆಗಿನ ಉಪಹಾರ ಕೂಟದಲ್ಲಿ ಆರ್.ಅಶೋಕ್, ವಿ.ಸೋಮಣ್ಣ, ರವಿಸುಬ್ರಮಣ್ಯ, ಸತೀಶ್ ರೆಡ್ಡಿ, ಉದಯ್ ಗರುಡಾಚಾರ್ ಸೇರಿದಂತೆ ಗೋವಿಂದರಾಜನಗರ ಹಾಗೂ ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಾಲಿಕೆ ಸದಸ್ಯರು ಕೂಡಾ ಭಾಗಿಯಾಗಿದ್ರು. ಈ ವೇಳೆ, ಸೋಮಣ್ಣ ತೇಜಸ್ವಿ ಸೂರ್ಯಗೆ ಸತತ 2 ಗಂಟೆಗಳ ಕಾಲ ಪಾಠ ಮಾಡಿದ್ದಾರೆ.

‘ಭಾಷಣಗಳು ನಿಮಗೆ ಮತಗಳನ್ನು ತಂದುಕೊಡುವುದಿಲ್ಲ. ಕ್ಷೇತ್ರದಲ್ಲಿ ನಾವೆಲ್ಲಾ ಒಂದಾಗಿ ದುಡಿದರೆ ಮಾತ್ರ ಮತಗಳು ಕ್ರೂಢೀಕರಣವಾಗುತ್ತವೆ. ಸಾರ್ವಜನಿಕ ಬದುಕಿನಲ್ಲಿರುವವರು ಸಭ್ಯರಾಗಿರಬೇಕು. ಆದ್ರೆ ನಿಮ್ಮ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯ ಮಾತುಗಳಿಲ್ಲ. ನಿಮ್ಮ ವಿರುದ್ಧ ಬಹಳ ವಿಚಾರಗಳು ಬರುತ್ತಿದೆ. ಹುಡುಗಿಯರ ವಿಚಾರದಲ್ಲಿ ನೀವು ಎಚ್ಚರದಿಂದರಬೇಕು. ನೀವು ಆ ವಿಚಾರವನ್ನೆಲ್ಲಾ ಮುಂದಿಟ್ಟುಕೊಂಡು ಕೋರ್ಟ್ ಮೆಟ್ಟಿಲೇರಿದ್ದೀರಿ. ಇದು ಸರಿಯೇ..? ಇನ್ಮುಂದೆ ಇದೆಲ್ಲಾ ಬೇಡ. ನೀವು ಈ ಬಾರಿ ಆಯ್ಕೆಯಾದ ಬಳಿಕ ತಗ್ಗಿ ಬಗ್ಗಿ ನಡೆಯಬೇಕು. ಸಾರ್ವಜನಿಕ ಬದುಕಿನಲ್ಲಿ ನಿಮ್ಮ ನಡುವಳಿಕೆ ಹಾಗೂ ವರ್ತನೆ ತುಂಬಾ ಬದಲಾಗಬೇಕಿದೆ. ಒಂದು ವೇಳೆ ನೀವು, ನಾನೇ ಎಲ್ಲಾ, ನನ್ನಿಂದಲೇ ಎಲ್ಲಾ ಎಂಬ ಭಾವನೆ ನಿಮ್ಮಲ್ಲಿದ್ರೆ ಬಹಳ ಕಷ್ಟ. ಇದಕ್ಕೆಲ್ಲ ಮುಂದೆ ಬೆಲೆ ತೆರಬೇಕಾಗುತ್ತದೆ. ನಮಗೆ ಗೆಲ್ಲಿಸುವುದೂ ಗೊತ್ತು, ಸೋಲಿಸುವುದು ಗೊತ್ತು ಅಂತಾ ಎಂದು ಪ್ರತ್ಯಕ್ಷವಾಗಿಯೇ ವಿ.ಸೋಮಣ್ಣ ಕ್ಲಾಸ್​ ತಗೆದುಕೊಂಡಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv