ದಾರಿತಪ್ಪಿದ ಎತ್ತಿನಬಂಡಿ, ಶಾಸಕ ಉಮೇಶ್​ ಜಾಧವ್​ಗೆ ಗಾಯ!

ಕಲಬುರ್ಗಿ: ಕಾರಹುಣ್ಣಿಮೆ ನಿಮಿತ್ತ ಜಿಲ್ಲೆಯ ಚಿಂಚೋಳಿಯಲ್ಲಿ ಏರ್ಪಡಿಸಿದ್ದ ಎತ್ತಿನಬಂಡಿ ಓಟದ‌ ಸ್ಪರ್ಧೆಯಲ್ಲಿ ಚಕ್ಕಡಿ ಚಕ್ರ ಹರಿದು ಶಾಸಕ ಡಾ.ಉಮೇಶ್​ ಜಾಧವ್​ಗೆ ಗಾಯವಾಗಿದೆ. ಶಾಸಕರ ಮೇಲೆಯೇ ಚಕ್ಕಡಿ ಹರಿದಿದ್ದರಿಂದ ಶಾಸಕರ ಕಾಲು, ಬೆನ್ನುಮೂಳೆ, ಭುಜಕ್ಕೆ ಗಾಯಗಳಾಗಿದ್ದು ಹೆಚ್ಚಿನ ಚಿಕೆತ್ಸೆಗೆಂದು ಹೈದರಾಬಾದ್​ಗೆ ಕರೆದೊಯ್ಯಲಾಗಿದೆ. ಘಟನೆಯಲ್ಲಿ ಶಾಸಕರಷ್ಟೆ ಅಲ್ಲದೆ ಇನ್ನು ಕೆಲವರಿಗೆ ಘಟನೆಯಲ್ಲಿ ಗಾಯಗಳಾಗಿವೆ.