ಶಿಕ್ಷಕರ ವೇತನ ಕಡಿತ ಮಾಡಿದ್ರೆ ಬೀದಿಗಿಳಿದು ಹೊರಾಟ ನಡೆಸುತ್ತೆವೆ: ರಾಮುಲು

ಯಾದಗಿರಿ: ಎಸ್ಎಸ್ಎಲ್​ಸಿ & ಪಿಯುಸಿ ಫಲಿತಾಂಶದಲ್ಲಿ ಶೇಕಡಾ ವಾರು ಫಲಿತಾಂಶ ಕುಸಿತವಾದ ಹಿನ್ನಲೆಯಲ್ಲಿ ಶಿಕ್ಷಕರ ಮತ್ತು ಉಪನ್ಯಾಸಕರ ವೇತನ ಕಡಿತಕ್ಕೆ ಜಿಲ್ಲಾಧಿಕಾರಿ ನಿರ್ಧರಿಸಿದ್ದಾರೆ. ಅವರ ಈ ನಿರ್ಧಾರಕ್ಕೆ ಯಾದಗಿರಿಯಲ್ಲಿ ಪ್ರತಿಕ್ರಿಯಿಸಿರುವ ಸಚಿವ ಶ್ರೀ ರಾಮುಲು, ವೇತನ ಕಡಿತ ಮಾಡಲು ಮುಂದಾಗಿರುವುದು ಸರಿಯಲ್ಲ. ಫಲಿತಾಂಶ ಕಡಿಮೆ ಆಗಿರುವುದು ಸರ್ಕಾರದ ಬೇಜವಬ್ದಾರಿ ತನ, ಶಿಕ್ಷಕರು ಅವರ ಸಂಪೂರ್ಣ ಪ್ರಯತ್ನ ಪಟ್ಟಿರುತ್ತಾರೆ ಎಂದರು. ಶಿಕ್ಷಕರ ವೇತನ ಕಟ್​ ಮಾಡುವ ಮುಂಚೆ ಜಿಲ್ಲಾಧಿಕಾರಿಗಳು ಸರ್ಕಾರದೊಂದಿಗೆ  ಚರ್ಚಿಸಲಿ. ಶಿಕ್ಷಕರ ವೇತನ ಕಟ್ ಮಾಡಿದ್ರೆ ಬಿಜೆಪಿ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತೆ ಅಂತಾ ಎಚ್ಚರಿಸಿದ್ರು.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv