ಆಪರೇಷನ್ ಕಮಲ: ಬಿಎಸ್ವೈ ಸರದಿ ಮುಗೀತು, ಈಗ ಪಿಎ, ಡ್ರೈವರ್ಸ್​ ಸರದಿ -ರಾಮುಲು

ಚಿತ್ರದುರ್ಗ: ಮೈತ್ರಿ ಸರ್ಕಾರದ ಮುಖಂಡರ ಉದ್ದೇಶ ಒಂದೇ.. ಬಿಜೆಪಿಗೆ ಅಧಿಕಾರ ನೀಡಬಾರದು ಎಂಬುದು. ಹಾಗಂತ, ಸರ್ಕಾರ ಮಾಡಬೇಕು ಎಂಬುದು ನಮ್ಮ ತಲೆಯಲ್ಲಿಯೂ ಇಲ್ಲ. ಆದ್ರೆ ಕಲುಷಿತಗೊಂಡು ಸರ್ಕಾರ ಬಿದ್ದರೆ, ನಮಗೇ ಅಧಿಕಾರ ಕೊಡಿ ಅಂತಾ ಕೇಳಿದ್ದೇವೆ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ.

ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶ್ರೀರಾಮುಲು, ಆಪರೇಷನ್ ಕಮಲ ವಿಚಾರಕ್ಕೆ ರಾಮುಲು.. ಯಡಿಯೂರಪ್ಪ ಸರದಿ ಮುಗಿತು. ಈಗ ನಮ್ಮ ಪಿಎಗಳ ಸರದಿ, ನಂತರ ನಮ್ಮ ಡ್ರೈವರ್​ಗಳ ಸರದಿ ಬರುತ್ತೆ. ಅವರು ಯಾರಿಗೆ ಬೇಕಾದರೂ ಸಚಿವ ಸ್ಥಾನ ನೀಡಲಿ. ಸರ್ಕಾರಿ ಯಂತ್ರ ಕುಸಿದು ಬಿದ್ದಿದೆ. ನಮ್ಮ ನಾಯಕರಾದ ಯಡಿಯೂರಪ್ಪ, ಜಗದೀಶ್​​ ಶೆಟ್ಟರ್ ಜೊತೆ ಕುಳಿತು ಗಂಭೀರ ಚರ್ಚೆ ಮಾಡಿ ನಂತರ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ಕೆಡಿಪಿ ಸಭೆಯಲ್ಲಿ ಬೆಂಬಲಿಗರ ದರ್ಬಾರ್ ಪ್ರತಿಕ್ರಿಯೆ:
ಕೆಡಿಪಿ ಸಭೆಯಲ್ಲಿ ತಮ್ಮ ಬೆಂಬಲಿಗರ ದರ್ಬಾರ್ ಕುರಿತು ಪ್ರತಿಕ್ರಿಯೆ ನೀಡಿದ ರಾಮುಲು, ಕೆಲವು ಸಂದರ್ಭಗಳಲ್ಲಿ ನಮ್ಮ ಬೆಂಬಲಿಗರು ಭಾವೋದ್ವೇಗಕ್ಕೆ ಒಳಗಾಗಿರುತ್ತಾರೆ. ಕಾನೂನು ಪರಿಪಾಲನೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಜನಸಂದಣಿ ಜಾಸ್ತಿ ಇರುವ ಕಾರಣ ಒಳ ಪ್ರವೇಶಿಸಿದ್ದಾರೆ. ಸ್ವಲ್ಪ ಶಿಷ್ಠಾಚಾರ ಉಲ್ಲಂಘನೆ ಮಾಡಿದ್ದರೂ ಕೂಡ ಅದು ಅಲ್ಲಿನ ಜನಸಂದಣಿಯಿಂದ ಒಳಗೆ ಬಂದಿದ್ದಾರೆ. ಉದ್ದೇಶಪೂರ್ವಕವಾಗಿ ಯಾರೂ ಬಂದಿಲ್ಲ ಎಂದು ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv