ಎಂ.ಬಿ.ಪಾಟೀಲ್ ಒಬ್ಬ ಮಂಗ: ಶಾಮನೂರು ಶಿವಶಂಕರಪ್ಪ ವಾಗ್ದಾಳಿ

ದಾವಣಗೆರೆ: ಸಚಿವ ಎಂ.ಬಿ.ಪಾಟೀಲ್ ಒಬ್ಬ ಮಂಗ, ಬಹಳಾ ಸಣ್ಣ ವಯಸ್ಸಿನ ವ್ಯಕ್ತಿ. ಆತನ ಬಗ್ಗೆ ನಾನು ಏನೂ ಹೇಳಲ್ಲ ಅಂತಾ ಶಾಸಕ ಶಾಮನೂರ ಶಿವಶಂಕರಪ್ಪ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಎಂ.ಬಿ.ಪಾಟೀಲ್ ಅಡ್ಡ ದಾರಿ ಹಿಡಿದಿದ್ದ. ನಾನು ಮತ್ತು ಪ್ರಭಾಕರ್ ಕೋರೆ ಆತನನ್ನ ಉದ್ಧಾರ ಮಾಡಿದ್ದೇವೆ. ನಾನು ಹೇಗೆ ಬೆಳೆದಿದ್ದೇನೆ ಎಂಬುದು ಆತನಿಗೇನು ಗೊತ್ತು? ನಿನ್ನೆಯ ಕಾರ್ಯಕ್ರಮದಲ್ಲಿ ನಾನು ನೇರವಾಗಿ ಆತನ ಹೆಸರು ಹೇಳಿಲ್ಲ. ಆತನ ಬಗ್ಗೆ ಹೆಚ್ಚು ಕಾಮೆಂಟ್ ಬೇಡ, ಸಿಕ್ಕಾಗ ಮಾತಾಡುವೆ. ಬಿ ಫಾರಂ ಹರಿದು ಹಾಕಿದ ಬಗ್ಗೆ ಹೇಳಿದ್ದಾನೆ, ಆತನಿಗೇನು ಗೊತ್ತು ಆತ ಒಬ್ಬ ಮಂಗ ಅಂತಾ ಕಿಡಿಕಾರಿದ್ರು.