ಎಂ.ಬಿ. ಪಾಟೀಲಗೆ ತುಂಬಾ ಸಹಾಯ ಮಾಡಿದ್ದೇವೆ -ಶಾಮನೂರು

ಧಾರವಾಡ: ಗೃಹ ಸಚಿವ ಎಂ.ಬಿ. ಪಾಟೀಲಗೆ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತೆ ಟಾಂಗ್ ಕೊಟ್ಟಿದ್ದಾರೆ. ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಆತನಿಗೆ ವಿಚಾರಗಳು ಗೊತ್ತಿಲ್ಲ. ಅದಕ್ಕೆ ಹೀಗೆಲ್ಲ ಮಾತಾಡ್ತಾ ಇದ್ದಾನೆ. ಆತನನ್ನು ನಿರ್ಲಕ್ಷ್ಯ ಮಾಡಿ ಬಿಡಬೇಕು ಅಂತಾ ನಾವೆಲ್ಲ ನಿರ್ಧರಿಸಿದ್ದೇವೆ. ನಾನು ಹಿರಿಯನಾಗಿ ಮಾತನಾಡಿ ಹೇಳಿದಾಗ ಸುಧಾರಿಸಿಕೊಳ್ಳಬೇಕಿತ್ತು. ಹಿಂದೆ ಅವರೇನಿದ್ದರು ಅಂತಾ ನನಗೆ ಗೊತ್ತಾ. ಪ್ರಭಾಕರ ಕೋರೆ ಮತ್ತು ನಾನು ಎಂ.ಬಿ. ಪಾಟೀಲಗೆ ತುಂಬಾ ಸಹಾಯ ಮಾಡಿದ್ದೇವೆ. ಅದನ್ನೆಲ್ಲ ಆತ ಮರೆತು ಬಿಟ್ಟಿದ್ದಾನೆ. ನಾನು ಆ ಬಗ್ಗೆ ಮಾತನಾಡಬಾರು ಅಂತಾ ವಿಷಯ ಕ್ಲೋಸ್ ಮಾಡಿದ್ದೇವೆ. ನನಗೆ ಸಚಿವ ಸ್ಥಾನ ಏನೂ ಬೇಕಾಗಿಲ್ಲ, ಅದರ ಅಪ್ಪನಂಗೆ ನಾನಿದ್ದೇನೆ. ಬಿಜೆಪಿಯವರಿಂದ ಏನೂ ಆಗುವುದಿಲ್ಲ. ಸುಮ್ಮನೇ ಅವರು ಹೇಳ್ತಾ ಇರತಾರಷ್ಟೇ. ನಮ್ಮ ಪಕ್ಷದಿಂದ ಯಾರೂ ಹೋಗೋದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv