‘ರಾಹುಲ್‌ ಹತ್ರ ನಾನ್ ಹೋಗಲ್ಲ,ಬೇಕಿದ್ರೆ ಅವ್ರೇ ಬರಲಿ’: ಶ್ಯಾಮನೂರು ಗರಂ

ದಾವಣಗೆರೆ: ರಾಹುಲ್‌ಗಾಂಧಿ ಅವ್ರ ಹತ್ತಿರ ನಾನ್‌ ಹೋಗಲ್ಲ. ಬೇಕಿದ್ರೆ ಅವರ ನನ್ನ ಹತ್ತಿರ ಬರಲಿ ಅಂತಾ ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಎಐಸಿಸಿ ಅಧ್ಯಕ್ಷರ  ವಿರುದ್ಧವೇ ಗರಂ ಆಗಿದ್ದಾರೆ. ಸಚಿವ ಸ್ಥಾನ ಕೈತಪ್ಪಿದ್ದರ ಹಿನ್ನೆಲೆಯಲ್ಲಿ ಇಂದು ದಾವಣಗೆರೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ತಮ್ಮ ಬೆಂಬಲಿಗರಿಗೆ ಮಾತ್ರ ಸಚಿವ ಸ್ಥಾನ ಕೊಡಿಸಿದ್ದಾರೆ. ಈಗ ಸಿದ್ದರಾಮಯ್ಯನವರದ್ದೇ ಎಲ್ಲಾ ನಡೀತಿದೆ. ಪಕ್ಷದಲ್ಲಿ ಲಿಂಗಾಯತರನ್ನ ಹೀಗೆ ಕಡೆಗಣನೆ ಮಾಡಿದರೆ ಚಾಮುಂಡೇಶ್ವರಿಯಲ್ಲಿ ಆದ ಸ್ಥಿತಿ ಮತ್ತೆ ಆಗಲಿದೆ. 60 ಸಾವಿರ ವೋಟ್‌ ಡಿಪಾಸಿಟ್‌ ಹೋದ  ರೀತಿ ಮತ್ತೆ ಆಗುತ್ತದೆ ಎಂದು ಸಿದ್ದರಾಮಯ್ಯಗೆ ಪರೋಕ್ಷವಾಗಿ ಕುಟುಕಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: conatct@firstnews.tv