ದತ್ತಾವಧೂತ ಶ್ರೀಗಳ ಆಶೀರ್ವಾದ ಪಡೆದ ಶ್ರೀರಾಮುಲು

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಮದ ದತ್ತಾವಧೂತ ಆಶ್ರಮಕ್ಕೆ ಮೊಣಕಾಲ್ಮೂರು ಶಾಸಕ ಶ್ರೀರಾಮುಲು ಭೇಟಿ ನೀಡಿ ಶ್ರೀ ಸತ್ ಉಪಾಸಿ ಅಪ್ಪಾಜೀ ಶ್ರೀಗಳ ಆಶೀರ್ವಾದ ಪಡೆದರು. ಶ್ರೀ ಸತ್ ಉಪಾಸಿ ಅಪ್ಪಾಜೀ 65ನೇ ಜನ್ಮದಿನ ಹಿನ್ನೆಲೆಯಲ್ಲಿ ಆಶ್ರಮಕ್ಕೆ ಭೇಟಿ ನೀಡಿದ ಶಾಸಕರು ಶ್ರೀಗಳಿಗೆ ಶುಭಕೋರಿ ಆಶೀರ್ವಾದ ಪಡೆದುಕೊಂಡರು.