ಹಾಸ್ಟೆಲ್​ ಸಿಬ್ಬಂದಿ ವಿರುದ್ಧ ಗರಂ ಆದ ಶಾಸಕಿ ರೂಪಾಲಿ

ಕಾರವಾರ: ನಗರದ ದಿವಂಗತ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿದ ಶಾಸಕಿ ರೂಪಾಲಿ ನಾಯ್ಕ ಅಲ್ಲಿನ ಅವ್ಯವಸ್ಥೆ ಕಂಡು ಗರಂ ಆಗಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ವಿದ್ಯಾರ್ಥಿ ನಿಲಯ ಆರಂಭಗೊಂಡು ಸುಮಾರು ಮೂರು ವರ್ಷ ಕಳೆದರೂ ಇನ್ನೂ ಸಮರ್ಪಕ ಶೌಚಾಲಯವಿಲ್ಲ.

ಶೌಚಾಲಯದ ನೀರು ಹೊರಬಂದು ಗಬ್ಬು ನಾರುತ್ತಿದೆ. ಟ್ಯಾಂಕ್ ಸ್ವಚ್ಛಗೊಳಿಸದೆ 3 ವರ್ಷವಾಗಿದೆ. ಅಷ್ಟೇ ಅಲ್ಲದೆ ಸೊಳ್ಳೆಕಾಟ, ಊಟದಲ್ಲಿ ಏನೂ ಸತ್ವವೇ ಇರುವುದಿಲ್ಲ. ಸಾಂಬಾರು ಬರಿ ನೀರಾಗಿರುತ್ತದೆ. ಬೆಳಿಗ್ಗೆ ತಿಂಡಿಯನ್ನು ಕಡಿಮೆ ನೀಡುತ್ತಿದ್ದಾರೆ. ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಾರೆ ಅಂತಾ ವಿದ್ಯಾರ್ಥಿಗಳು ಶಾಸಕಿ ಮಂದೆ ತಮ್ಮ ಅಳಲು ತೋಡಿಕೊಂಡರು.

ಆದರೆ ವಿದ್ಯಾರ್ಥಿಗಳ ಮಾಡಿದ ಆರೋಪಗಳಿಗೆ ವಸತಿ ನಿಲಯ ಸಿಬ್ಬಂದಿ ಸಮಜಾಯಿಶಿ ನೀಡಲು ಮುಂದಾದರು. ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಸಮಸ್ಯೆ ಇರುವುದನ್ನು ನಾನು ಕಣ್ಣಾರೆ ನೋಡಿದ್ದೇನೆ. ಮತ್ತೆ ಏನೂ ಹೇಳಬೇಕಿಲ್ಲ. ಇಷ್ಟೊಂದು ದೊಡ್ಡ ಕಟ್ಟಡಕ್ಕೆ ಒಂದೂ ಶೌಚಾಲಯವಿಲ್ಲ. ಅಂತಹ ಕಟ್ಟಡವನ್ನು ಕಳೆದ ವರ್ಷ ಮಾಜಿ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹೇಗೆ ಉದ್ಘಾಟಿಸಿದರು. ₹ 5 ಕೋಟಿ ಕಾಮಗಾರಿ ಹಣವನ್ನು ಯಾರಿಗೆ ನೀಡಿದ್ದಾರೆ. ಎಷ್ಟು ಹಣ ಬಳಕೆಯಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡಿ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv