ಹೊನ್ನಾಳಿ ಠಾಣೆಗೆ ಮುತ್ತಿಗೆ ಹಾಕಿದ ಶಾಸಕ ರೇಣುಕಾಚಾರ್ಯ..!

ದಾವಣಗೆರೆ: ಪರ್ಮಿಟ್ ಹೊಂದಿದ್ದ ಟ್ರ್ಯಾಕ್ಟರ್​ನಲ್ಲಿ ಮರಳು ಸಾಗಾಣಿಕೆ ವೇಳೆ ಪೊಲೀಸರು ಟ್ರಾಕ್ಟರ್​​ ಸೀಜ್ ಮಾಡಿದ ಆರೋಪ ಕೇಳಿ ಬಂದಿರುವುದಕ್ಕೆ ಶಾಸಕ ರೇಣುಕಾಚಾರ್ಯ ಹೊನ್ನಾಳಿ ಠಾಣೆಗೆ ಮುತ್ತಿಗೆ ಹಾಕಿದ್ದಾರೆ.
ಪರ್ಮಿಟ್​ ಹೊಂದಿದ್ದ ಟ್ರಾಕ್ಟರ್​ನಲ್ಲಿ ಮರಳು ಸಾಗಾಣಿಕೆ ಮಾಡುತ್ತಿದ್ದ ವೇಳೆ ಪೊಲೀಸರು ವಾಹನವನ್ನು ಸೀಜ್​ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದನ್ನು ಖಂಡಿಸಿ ಶಾಸಕ ರೇಣುಕಾಚಾರ್ಯ ಮತ್ತು ಬೆಂಬಲಿಗರು ಹೊನ್ನಾಳಿ ಠಾಣೆಗೆ ಮುತ್ತಿಗೆ ಹಾಕಿದರು. ಈ ವೇಳೆ ಪೊಲೀಸ್ ಠಾಣೆ ಒಳಗೆ ನುಗ್ಗಲು ರೇಣುಕಾಚಾರ್ಯ ಯತ್ನಿಸಿದದರು. ಶಾಸಕರನ್ನು ಪೊಲೀಸರು ತಡೆಹಿಡಿದರು. ಬಳಿಕ ಪೊಲೀಸ್​ ಠಾಣೆ ಆವರಣದಲ್ಲಿ ರೇಣುಕಾಚಾರ್ಯ ಮತ್ತು ಬೆಂಬಲಿಗರು ಪ್ರತಿಭಟನೆ ಪ್ರತಿಭಟನೆ ನಡೆಸಿದರು. ರೇಣುಕಾಚಾರ್ಯರ ಮನವೊಲಿಸಲು ಪೊಲೀಸರು ಹರಸಾಹಸ ಪಟ್ಟರು.