ಮರಳು ಪೂರೈಕೆಗೆ ಆಗ್ರಹಿಸಿ ಶಾಸಕ ರೇಣುಕಾಚಾರ್ಯ ಉಪವಾಸ ಸತ್ಯಾಗ್ರಹ

ದಾವಣಗೆರೆ: ಕಡಿಮೆ ದರದಲ್ಲಿ ಮರಳು ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

ಹೊನ್ನಾಳಿ ತಾಲೂಕಾ ಕಚೇರಿ‌ ಎದುರು ಇಂದಿನಿಂದ ರೇಣುಕಾಚಾರ್ಯ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ. ಕಡಿಮೆ ದರದಲ್ಲಿ ಮರಳು ಪೂರೈಕೆ ಮಾಡಬೇಕು. ಹೊನ್ನಾಳಿ ತಾಲೂಕನ್ನ ಬರಪೀಡಿತ ಪ್ರದೇಶ ಎಂದು ಘೋಷಿಸಿಸುವಂತೆ ಆಗ್ರಿಹಿಸಿ ರೇಣುಕಾಚಾರ್ಯ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಜನರಿಗೆ ಮುಕ್ತವಾಗಿ ಮರಳು ವಿತರಿಸಲು ಕಳೆದ ಒಂದು ವಾರದ ಹಿಂದೆ ತುಂಗಭಧ್ರಾ ನದಿಗೆ ಇಳಿದು ಶಾಸಕ ರೇಣುಕಾಚಾರ್ಯ ಮರಳು ತುಂಬಿದ್ದರು. ಎತ್ತಿನ ಬಂಡಿಯಲ್ಲಿ ಬೆಂಬಲಿಗರೊಂದಿಗೆ ರೇಣುಕಾಚಾರ್ಯ ನದಿಯಿಂದ ಮರಳನ್ನು ಕ್ಷೇತ್ರದ ಜನರಿಗಾಗಿ ಹೊತ್ತೊಯ್ದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸೇರಿ 30 ಜನರ ವಿರುದ್ಧ ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv