ಕರಡಿ ಸಂಗಣ್ಣ ಅಷ್ಟೆ ಅಲ್ಲಾ, ಬಂದ್​ ವೇಳೆ ಹರಿಹಾಯ್ದವರಲ್ಲಿ ಇವ್ರು ಇದ್ರು..!

ದಾವಣಗೆರೆ: ರೈತರ ಸಾಲಮನ್ನಾ ಮಾಡುವಂತೆ ಆಗ್ರಹಿಸಿ ನಿನ್ನೆ ಬಿಜೆಪಿ ಕರ್ನಾಟಕ ಬಂದ್​ನಲ್ಲಿ ಪಾಲ್ಗೊಂಡಿತ್ತು. ಈ ವೇಳೆ ಕೊಪ್ಪಳದಲ್ಲಿ ಕರಡಿ ಸಂಗಣ್ಣ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದು ಸುದ್ದಿಯಾಗಿತ್ತು. ಇದೀಗ ಅವರಷ್ಟೆ ಅಲ್ಲದೆ ಮತ್ತೊಬ್ಬ ಶಾಸಕ ಪೊಲೀಸ್ರ ಜೊತೆಗೆ ವಾಗ್ವಾದ ನಡೆಸಿದ ವಿಡಿಯೋವೊಂದು ಹರಿದಾಡ್ತಿದೆ. ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ, ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ ದೃಶ್ಯ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬಂದ್​ ವೇಳೆ, ಬಿಜೆಪಿ ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ವ್ಯಾಪಾರಸ್ಥರನ್ನು ಒತ್ತಾಯಿಸ್ತಿದ್ದರು.​ ಈ ವೇಳೆ ಬಲವಂತದ ಬಂದ್​​ ಮಾಡಿಸಬೇಡಿ ಎಂದು ಪೊಲೀಸರು ಶಾಸಕರಿಗೆ ಹೇಳಿದ್ದಾರೆ. ಇಷ್ಟಕ್ಕೆ ಸಿಟ್ಟಿಗೆದ್ದ ರೇಣುಕಾಚಾರ್ಯ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುಂಚೆ, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ರು.

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv