ಪೊಲೀಸರಿಗೆ ಶಾಸಕ ರೇಣುಕಾಚಾರ್ಯ ಅವಾಜ್!

ದಾವಣಗೆರೆ: ಹೊನ್ನಾಳಿ ತಾಲೂಕಿನ ಹೊಳೆಮಾದಾಪೂರ ಗ್ರಾಮದಲ್ಲಿ ಮರಳು ತುಂಬುವ ವಿಚಾರವಾಗಿ ಪೊಲೀಸ್ ಅಧಿಕಾರಿಗಳಿಗೆ ಶಾಸಕ ಎಂ‌.ಪಿ. ರೇಣುಕಾಚಾರ್ಯ ಅವಾಜ್ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಪೊಲೀಸ್ ಸಿಬ್ಬಂದಿ ಮರಳು ತುಂಬಲು ಬಂದವರ ಮೊಬೈಲ್ ಕಸಿದುಕೊಂಡಿದ್ದರು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಶಾಸಕ ರೇಣುಕಾಚಾರ್ಯ, ಸತ್ಯಾಗ್ರಹ ಬಿಟ್ಟು ನದಿ ದಂಡೆಗೆ ಓಡಿಹೋಗಿ ಅಲ್ಲಿದ್ದ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದಲ್ಲದೆ ಹಿರಿಯ ಪೊಲೀಸ್ ಅಧಿಕಾರಿಗೆ ಪೋನ್ ಮಾಡಿ ಅವಾಜ್ ಹಾಕಿದ್ದಾರೆ ಅಂತಾ ಆರೋಪಿಸಲಾಗಿದೆ. ಮರಳು ಪೂರೈಕೆಗೆ ಆಗ್ರಹಿಸಿ 4 ದಿನಗಳಿಂದ, ರೇಣುಕಾಚಾರ್ಯ ಸತ್ಯಾಗ್ರಹ ನಡೆಸುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv