‘ಸರಕಾರ ಬೀಳಿಸೋಕೆ ನಾವು ಪ್ರಯತ್ನ ಮಾಡ್ತಿಲ್ಲ, ಅವರಾಗೆ ಬಿದ್ರೆ..’

ದಾವಣಗೆರೆ: ಸರಕಾರ ಬೀಳಿಸೋಕೆ ಪ್ರಯತ್ನ ಮಾಡ್ತಿಲ್ಲ. ನಾವಾಗೇ ಸರಕಾರ ಬೀಳಿಸೋಕೆ ಹೋಗಬಾರದೆಂದು ವರಿಷ್ಠರು ಹೇಳಿದ್ದಾರೆ ಎಂದು ದಾವಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ ರವೀಂದ್ರನಾಥ ಹೇಳಿದ್ದಾರೆ.

ದಾವಣಗೆರೆಯಲ್ಲಿ ಕಕ್ಕರಗೊಳ್ಳ ಮಹೇಶ್ವರ ದೇವಸ್ಥಾನದ ಕಳಸಾರೋಹಣ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸರಕಾರ  ಬೀಳಿಸೋಕೆ ಪ್ರಯತ್ನ ಮಾಡ್ತಿಲ್ಲ. ನಾವಾಗೇ ಸರಕಾರ ಬೀಳಿಸೋಕೆ ಹೋಗಬಾರದೆಂದು ವರಿಷ್ಠರು ಹೇಳಿದ್ದಾರೆ. ಅವರಾಗೆ ಬಿದ್ರೆ ನಾವು ಸರಕಾರ ರಚನೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದರು. ಕಾಂಗ್ರೆಸ್‌ನ ಕೆಲ ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ವದಂತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ದೇವಸ್ಥಾನದಲ್ಲಿ ರಾಜಕೀಯ ವಿಷಯ ಬೇಡ. ಈ ವಿಷಯದ ಬಗ್ಗೆ ಚರ್ಚೆ ಮಾಡಲ್ಲ ಎಂದು ಶಾಸಕ ರವೀಂದ್ರನಾಥ್ ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: conatct@firstnews.tv