ಹೋಮ ಹವನಕ್ಕೂ ಶೇ.20ರಷ್ಟು ಹಣ ಮೀಸಲಿಡಿ: ರಾಜುಗೌಡ ವ್ಯಂಗ್ಯ

ಬೆಂಗಳೂರು: ಬಿಜೆಪಿ ಅವರಿಗಿಂತ ಜೆಡಿಎಸ್​ನವರು ನಿಜವಾದ ಹಿಂದೂತ್ವವಾದಿಗಳು. ರೇವಣ್ಣನವರು ನಮಗಿಂತ ಜಾಸ್ತಿ ದೇವಸ್ಥಾನಕ್ಕೆ ಹೋಗ್ತಾರೆ, ಹೋಮ-ಹವನ ಮಾಡಿಸ್ತಾರೆ ಎಂದು ಬಿಜೆಪಿ ಶಾಸಕ ರಾಜೂಗೌಡ ವ್ಯಂಗ್ಯವಾಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, ನಾವು ಏನ್ ಮಾಡಿದ್ರೂ ಸಿಎಂ ಆಗೋದಕ್ಕೆ ಆಗಲಿಲ್ಲ. ರೇವಣ್ಣ ಅವರ ಪೂಜೆ, ಹೋಮ ಹವನದಿಂದಲೇ ಕುಮಾರಣ್ಣ ಸಿಎಂ ಆಗಿದ್ದು. ಹಾಗಾಗಿ ಈ ಬಜೆಟ್​ನಲ್ಲಿ ಹೋಮ ಹವನಕ್ಕೂ 20% ಹಣ ಮೀಸಲಿಡಿ ಎಂದು ಹೆಚ್‌.ಡಿ.ರೇವಣ್ಣರ ಕಾಲೆಳೆದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv