ಬಿಎಂಟಿಸಿ ಅಧ್ಯಕ್ಷರಾಗಿ ಶಾಸಕ ಹ್ಯಾರಿಸ್ ​ಪದಗ್ರಹಣ

ಬೆಂಗಳೂರು: ಬಿಎಂಟಿಸಿಯ ಅಧ್ಯಕ್ಷರಾಗಿ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇಂದು ಶಾಸಕ ಹ್ಯಾರಿಸ್ ಜನ್ಮದಿನ. ಈ ಹಿನ್ನೆಲೆಯಲ್ಲಿ ಹ್ಯಾರಿಸ್ ಬೆಂಬಲಿಗರು ಶಾಂತಿನಗರ ಬಿಎಂಟಿಸಿ ಕೇಂದ್ರ ಕಚೇರಿಯನ್ನು ಮದುವೆ ಮನೆಯಂತೆ ಸಿಂಗಾರ ಮಾಡಿದ್ರು. ಕಾರ್ಯಕ್ರಮಕ್ಕೆ ಹ್ಯಾರಿಸ್​​ ಕುಟುಂಬ ಸಮೇತ ಆಗಮಿಸಿದ್ರು. ಅಲ್ಲದೆ, ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ಕೂಡ ಭಾಗಿಯಾಗಿದ್ದರು.