‘ಎಂಎಲ್​ಎ ಅಂದ್ರೆ ಮಾರ್ಕೆಟ್​ನಲ್ಲಿ ಮಾರಾಟಕ್ಕಿಟ್ಟಿರೋ ಬದನೆಕಾಯಿ ಅಲ್ಲ’

ಹುಬ್ಬಳಿ: ಎಂಎಲ್​ಎ ಅಂದ್ರೆ ಮಾರ್ಕೆಟ್​ನಲ್ಲಿ ಮಾರಟಕ್ಕೆ ಇಟ್ಟಿರೋ ಬದನೆಕಾಯಿ ಅಲ್ಲ. ನಾನು ಕೂಡ ಮಂತ್ರಿಗಿರಿಗಾಗಿ ಲಾಬಿ ಮಾಡಿದ್ದೇನೆ. ಮೂರು ಬಾರಿ ಶಾಸಕನಾಗಿದ್ದೇನೆ. ನನಗೆ ಸರ್ಕಾರ ಸಚಿವ ಸ್ಥಾನ‌ ನೀಡಬೇಕು, ವರಿಷ್ಠರು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ ಎಂದು ಕುಂದಗೋಳ ಶಾಸಕ ಸಿ.ಎಸ್.ಶಿವಳ್ಳಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್​ 22ಕ್ಕೆ ಸಂಪುಟ ವಿಸ್ತರಣೆ ಮಾಡ್ತೀವಿ ಎಂದಿದ್ದಾರೆ. ಡಿಸೆಂಬರ್​ ಬಳಿಕ  ಏನಾಗುತ್ತೆ ನೋಡೋಣ. ನನ್ನನ್ನ  ಜನ ಆಯ್ಕೆ ಮಾಡಿದ್ದಾರೆ, ಅವರಿಗೆ ದ್ರೋಹ ಮಾಡಲ್ಲ. ಸಚಿವ ಸ್ಥಾನ ಸಿಗದೆ ಹೊದ್ರೂ ಪಕ್ಷ ಬಿಡಲ್ಲ, ಪಕ್ಷದಲ್ಲಿ ಇದ್ದುಕೊಂಡು ‌ಕ್ಷೇತ್ರ ಅಭಿವೃದ್ಧಿ ಮಾಡುತ್ತೇನೆ. ಪಕ್ಷದಲ್ಲಿದ್ದುಕೊಂಡೆ ವರಿಷ್ಠರ ಮೇಲೆ ಒತ್ತಡ ಹಾಕುತ್ತೇವೆ. ನಮಗೆ ನ್ಯಾಯ ಕೇಳುವ ಹಕ್ಕಿದೆ.  ಮೂರು ಬಾರಿ ಶಾಸಕನಾಗಿದ್ದೇನೆ. ನನಗೂ ಸಚಿವ ಸ್ಥಾನ‌ದ ಮೇಲೆ ಆಸೆ ಇದೆ. ಈ ಬಾರಿ ಸಂಪುಟ ವಿಸ್ತರಣೆ ದಿನಾಂಕ ಮುಂದೂಡುವುದಿಲ್ಲ ಅನ್ನೋ ವಿಶ್ವಾಸ ಇದೆ. ವರಿಷ್ಠರು ಹಾಗೂ ಹೈಕಮಾಂಡ್ ಸೇರಿ ತೆಗದುಕೊಂಡಿರೋ ನಿರ್ಣಯ ಇದು. ನನಗೆ ಸಚಿವ ಸ್ಥಾನ ಸಿಗೋ ಬಗ್ಗೆ ವಿಶ್ವಾಸವಿದೆ ಎಂದರು.