ಮಳೆಹಾನಿ ಪ್ರದೇಶಕ್ಕೆ ಶಾಸಕರ ಭೇಟಿ

ಬೆಳಗಾವಿ: ಸವದತ್ತಿ ಪಟ್ಟಣದಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ, ಶಾಸಕ ಆನಂದ ಮಾಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಲುವೆ ಮತ್ತು ಸೇತುವೆಗಳ ಪುನರ್​​​​​ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಅವರಿಗೆ ಪುರಸಭೆ ಅಧಿಕಾರಿಗಳು ಹಾಗೂ ತಹಶೀಲ್ದಾರ್​​​​ ಸಾಥ್​ ನೀಡಿದರು. ಬುಧವಾರ ಮಳೆ ಸುರಿದು ಲಂಡೇನ ನಾಲಾದಿಂದ ಮನೆಗಳಿಗೆ ನೀರು ಹೋಗಿ ಹಾನಿ ಸಂಭವಿಸಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv