ಸತೀಶ್​ ಜಾರಕಿಹೊಳಿ ಜೊತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ ಮಹೇಶ್​​ ಕುಮಟಳ್ಳಿ

ಬೆಳಗಾವಿ: ಕಾಂಗ್ರೆಸ್​ನ ಅತೃಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಅಥಣಿ ಶಾಸಕ ಮಹೇಶ್​​ ಕುಮಟಳ್ಳಿ ದಿಢೀರ್​ ಬೆಳವಣಿಗೆ ಒಂದರಲ್ಲಿ ಸಚಿವ ಸತೀಶ್ ಜಾರಕಿಹೊಳಿ ಜೊತೆ ಕಾಣಿಸಿಕೊಂಡಿದ್ದಾರೆ.

ನಗರದಲ್ಲಿಂದು ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಗಳಿಗೆ ಸಚಿವ ಸತೀಶ್ ‌ಜಾರಕಿಹೊಳಿ ಚಾಲನೆ‌ ನೀಡಿದರು. ಈ ವೇಳೆ ಸಚಿವರ ಬಳಿ ಬಂದ ಶಾಸಕ‌ ಮಹೇಶ್ ‌ಕುಮಟಳ್ಳಿ, ಸತೀಶ್ ‌ಜಾರಕಿಹೊಳಿ ಜತೆಗೆ ಮಾತನಾಡಲು‌‌ ಪ್ರಯತ್ನಿಸಿದರು. ಆಗ ಮತ್ತೊಂದು‌‌ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಚಿವ ಸತೀಶ್​ ‌ಜಾರಕಿಹೊಳಿ ಶಾಸಕ ಮಹೇಶ್ ಕುಮಟಳ್ಳಿಯನ್ನ ತಮ್ಮ ವಾಹನದಲ್ಲಿ ಕೂರಿಸಿಕೊಂಡು ಹೋದರು.

ಕೆಲ ದಿನಗಳಿಂದ ಅತೃಪ್ತ ಮಾಜಿ‌ ಸಚಿವ ರಮೇಶ್ ಜಾರಕಿಹೊಳಿ ಟೀಂನಲ್ಲಿ ಮಹೇಶ್ ಕುಮಟಳ್ಳಿ ಗುರುತಿಸಿಕೊಂಡಿದ್ದರು. ಅಲ್ಲದೇ ಹಲವು ದಿನಗಳ ಕಾಲ ರಮೇಶ್​ ಜಾರಕಿಹೊಳಿ ಜತೆಗೆ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ ಕುಮಟಳ್ಳಿ ಇಂದು ಸಚಿವ ಸತೀಶ್ ಜಾರಕಿಹೊಳಿ ಜತೆಗೆ‌ ಗುರುತಿಸಿಕೊಳ್ಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv