‘‘ಮಾಧುಸ್ವಾಮಿ ಪ್ರಚಾರದ ಉದ್ವೇಗದಲ್ಲಿ ಮತದಾರನ ಮೇಲೆ ಹಲ್ಲೆ ಮಾಡಿರಬಹುದು’’

ಮಂಡ್ಯ: ಬಿಜೆಪಿ ಶಾಸಕ ಮಾಧುಸ್ವಾಮಿ ಓರ್ವ ಶಾಸಕರಾಗಿ ಮತದಾರರ ಮೇಲೆ ಹಲ್ಲೆ ನಡೆಸಬಾರದಿತ್ತು. ಪ್ರಚಾರದ ವೇಳೆ ಉದ್ವೇಗದಲ್ಲಿ ಹಲ್ಲೆ ಮಾಡಿರಬಹುದು ಈ ಸಂಬಂಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಇರುವ ಮಾಹಿತಿ ಪ್ರಕಾರ ನಿಖಿಲ್ ಹೆಚ್ಚು ಮತಗಳ ಅಂತರದಿಂದ ಗೆಲ್ತಾರೆ. ಕೇವಲ 3 ತಿಂಗಳ‌‌ ಹಿಂದೆ ಮೈತ್ರಿ ಅಭ್ಯರ್ಥಿಯಾಗಿದ್ದ ಎಲ್‌.ಆರ್.ಶಿವರಾಮೇಗೌಡ ಅತ್ಯಧಿಕ ಬಹುಮತದೊಂದಿಗೆ ಗೆಲುವು ಸಾಧಿಸಿದ್ರು. ಹೀಗಾಗಿ 3 ತಿಂಗಳಲ್ಲಿ ಬದಲಾವಣೆ ಆಗುತ್ತೆ ಅಂತ ನನಗೆ ಅನಿಸಲ್ಲ. ಕೆಲವರು ವೈಯುಕ್ತಿಕ ಕಾರಣಗಳಿಂದ ಸುಮಲತಾ ಜೊತೆ ಹೋಗಿರಬಹುದು. ಆದರೆ ಇಡೀ ಕಾಂಗ್ರೆಸ್ ಕಾರ್ಯಕರ್ತರು ನಿಖಿಲ್ ಪರವಾಗಿದ್ದಾರೆ ಎಂದರು.

ತುಮಕೂರು ಕ್ಷೇತ್ರದಲ್ಲಿ ದೇವೇಗೌಡರಿಗೆ ಕುರುಬರು, ಗೊಲ್ಲರ ವಿರೋಧವಿದೆ ಎನ್ನಲಾಗುತ್ತಿದೆ. ಆದ್ರೆ ನನ್ನ ಪ್ರಕಾರ ತುಮಕೂರಿನಲ್ಲಿ ದೇವೇಗೌಡರಿಗೆ ಯಾವ ಸಮುದಾಯದ ವಿರೋಧವಿಲ್ಲ. ಕೆಲವರು ಆ ಪಕ್ಷಕ್ಕೆ ಕೆಲವರು ಈ ಪಕ್ಷಕ್ಕೆ ಮತ ಹಾಕಬಹುದು. ವೋಟಿಂಗ್​ ಪರ್ಸೆಂಟೇಜ್ ವೇರಿಯೇಷನ್ ಆಗಬಹುದು. ಹಾಗೆ ಅಂದ ಮಾತ್ರಕ್ಕೆ ಒಂದು ಸಮುದಾಯ, ಒಂದು ಜಾತಿ ವಿರೋಧವಿದೆ ಅಂದ್ರೆ ಸರಿ ಕಾಣಿಸಲ್ಲ. ಇನ್ನು ಸಂಸದ ಎಸ್‌.ಪಿ.ಮುದ್ದಹನುಮೇಗೌಡರ ವಿರೋಧವಿಲ್ಲ. ಮಧುಗಿರಿ, ಕೊರಟೆಗೆರೆ ಕ್ಷೇತ್ರದಲ್ಲಿ  ಅವರು ಪ್ರಚಾರ ಮಾಡಿದ್ದಾರೆ. ಇನ್ನು ಮುಂದೆ ನಮ್ಮ ಜೊತೆ  ಪ್ರಚಾರಕ್ಕೆ ಬರ್ತೀನಿ ಅಂತ ಹೇಳಿದ್ದಾರೆ ಎಂದು ಪರಮೇಶ್ವರ್ ಹೇಳಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv