‘ದೇವೇಗೌಡರನ್ನು ಹೊರಗೆ ಹಾಕಿದ್ದ ಕುಮಾರಸ್ವಾಮಿ’ ಶಾಸಕ ಮಾಧುಸ್ವಾಮಿ ಆರೋಪ

ತುಮಕೂರು: ದೇವೇಗೌಡರು ಹಳೇ ವಿದ್ಯಾರ್ಥಿ ಭವನದ ಸ್ಟೇಷನ್ ಎದುರು ಭಾಷಣ ಮಾಡುವಾಗ, ಕಲ್ಲಲ್ಲಿ ಹೊಡೆದರು, ನಾನು ಎದೆಕೊಟ್ಟೆ. ತಬ್ಬಿಕೊಂಡು ದೇವೇಗೌಡರು ಅತ್ತಿದ್ದರು. ನನ್ನ ಮಕ್ಕಳಾದ್ರೂ ಈ ರೀತಿ ಏಟು ತಿನ್ನುತ್ತಿರಲ್ಲಿಲ್ಲ ಅಂತ ಹೇಳಿದ್ರು. ಅಂತಹ ದೇವೇಗೌಡರನ್ನು ಒದ್ದು  ಕುಮಾರಸ್ವಾಮಿ ಆಚೆ ಹಾಕಿದ್ದರು, ಮನೆಯಲ್ಲಿ ಇಟ್ಟುಕೊಂಡಿರಲಿಲ್ಲ ಎಂದು ಚಿಕ್ಕನಾಯಕನಹಳ್ಳಿ ಶಾಸಕ ಮಾಧುಸ್ವಾಮಿ ಬಿಜೆಪಿ ಪ್ರಚಾರದಲ್ಲಿ ಮಾತನಾಡಿದ್ದ ವಿಡಿಯೋವೊಂದು ವೈರಲ್​ ಆಗಿದೆ.

ಉಗ್ರಪ್ಪ ದೇವೇಗೌಡರ ಬೆನ್ನುಜ್ಜುತ್ತಿದ್ದರು. ಕುಮಾರಪಾರ್ಕ್​ನ ಸಣ್ಣ ಕ್ವಾಟ್ರಸ್​ನಲ್ಲಿ ಅವರು ವಾಸ ಮಾಡುತ್ತಿದ್ದರು. ಈಗ  ಕುಮಾರಸ್ವಾಮಿ ನನ್ನ ಬಳಿ ಬರಲಿ,ಯಾಕಪ್ಪ ಅವತ್ತು ನಿಮ್ಮ ಅಪ್ಪನನ್ನು ಹೊರಗೆ ಹಾಕಿದ್ದೆ ಅಂತ ಕೇಳ್ತೀನಿ.. ಟಿಫನ್ ಕ್ಯಾರಿಯರ್​ನಲ್ಲಿ ಊಟ ತೆಗೆದುಕೊಂಡು ಹೋಗಿ ಕೊಡುತ್ತಿದ್ದವರು ನಾವು ಮಕ್ಕಳಲ್ಲ. ಬೆನ್ನು ತಿಕ್ಕಿದ್ದ‌ ಉಗ್ರಪ್ಪ, ಮಾನಸಪುತ್ರ ಬಿ.ಎಲ್ ಶಂಕರ್ ಯಾಕೆ ಆಚೆ ಹೋದರು?. ವೈ.ಕೆ ರಾಮಯ್ಯ ಯಾಕೆ ಕಾಂಗ್ರೆಸ್​ಗೆ ಹೋದ್ರು ಎಂದು ಶಾಸಕ ಮಾಧುಸ್ವಾಮಿ ಕಿಡಿಕಾರಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್​  ವೈರಲ್​ ಆಗಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv