ಇಂದು ಜಾಮೀನು ಸಿಕ್ರೂ, ಗಣೇಶ್​ ಬಿಡುಗಡೆ ನಾಳೇಯೇ..

ಬೆಂಗಳೂರು: ಕಂಪ್ಲಿ ಶಾಸಕ ಗಣೇಶ್​ಗೆ ಇಂದು ಬೇಲ್ ಸಿಕ್ಕಿದೆ. ಆದ್ರೂ ಅವರಿಗೆ ಇಂದು ಬಿಡುಗಡೆ ಭಾಗ್ಯವಿಲ್ಲ. ಶಾಸಕ ಆನಂದ್​ ಸಿಂಗ್​ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ್​ರನ್ನು ಬಂಧಿಸಲಾಗಿತ್ತು. ಪ್ರಕರಣ ಸಂಬಂಧ ಜಾಮೀನಿಗಾಗಿ ಗಣೇಶ್​ ಪರದಾಡುತ್ತಿದ್ರು. ಕೊನೆಗೂ ಇಂದು ಹೈಕೋರ್ಟ್ ಗಣೇಶ್​ಗೆ, ದೇಶಬಿಟ್ಟು ತೆರಳುವಂತಿಲ್ಲ ಹಾಗೂ 15 ದಿನಕ್ಕೊಮ್ಮೆಸಂಬಂಧಪಟ್ಟ ಪೊಲೀಸ್ ಠಾಣೆಗೆ ತೆರಳಿ ಸಹಿ ಮಾಡುವಂತೆ ಷರತ್ತು ವಿಧಿಸಿ ಜಾಮೀನು ನೀಡಿದೆ. ಆದ್ರೂ ಗಣೇಶ್​ಗೆ ಇಂದು ಬಿಡುಗಡೆ ಭಾಗ್ಯವಿಲ್ಲ. ಯಾಕೆಂದ್ರೆ ಹೈಕೋರ್ಟ್​ ಆದೇಶ ಪ್ರತಿ ಇನ್ನೂ ವಕೀಲರಿಗೆ ಸಿಕ್ಕಿಲ್ಲ. ಕೋರ್ಟ್​ ಕೆಲ ಷರತ್ತುಗಳನ್ನು ಬದಲಾಯಿಸಿದ ಕಾರಣ ಆದೇಶ ಪ್ರತಿ ಸಿಗುವುದು ತಡವಾಗಿದೆ. ನಾಳೆ ಆದೇಶದ ಪ್ರತಿ ಪಡೆಯಲಿರುವ ಗಣೇಶ್​ ಪರ ವಕೀಲರು, ಬಳಿಕ ರಾಮನಗರ ಕೋರ್ಟ್ ಮುಂದೆ ಹೈಕೋರ್ಟ್ ಆದೇಶದ ಪ್ರತಿ ನೀಡಲಿದ್ದಾರೆ. ನಾಳೆ ಸಂಜೆ ವೇಳೆಗೆ ಶಾಸಕ ಗಣೇಶ್ ಬಿಡುಗಡೆ ಯಾಗುವ ಸಾಧ್ಯತೆ ಇದೆ.