ಹೋರಿ ಬಿಟ್ಟು ಹರಕೆ ತೀರಿಸಿದ ಶಾಸಕರ ಅಭಿಮಾನಿಗಳು..!

ಕೊಪ್ಪಳ: ಚುನಾವಣೆ ಸಂದರ್ಭದಲ್ಲಿ ಕೊಪ್ಪಳದ ಕನಕಗಿರಿಯಲ್ಲಿ ಶಾಸಕ ಬಸವರಾಜ ದಡೇಸೂಗೂರು ಗೆಲುವಿಗಾಗಿ ಅಭಿಮಾನಿಗಳು ದೇವರಿಗೆ ಗೂಳಿ ಬಿಡುವುದಾಗಿ ಹರಕೆ ಹೊತ್ತಿಕೊಂಡಿದ್ದರು. ತಮ್ಮ ನಾಯಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ಇಂದು ಶಾಸಕರಿಗೆ ಸನ್ಮಾನ ಮಾಡಿ ಕನಕಾಚಲ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಹೋರಿಯನ್ನು ಬಿಡುವ ಮೂಲಕ ತಮ್ಮ ಹರಕೆಯನ್ನು ತೀರಿಸಿದ್ದಾರೆ. ಈ ವೇಳೆ ಶಾಸಕ ದಡೇಸೂಗೂರು ಹೋರಿಗೆ ಪೂಜೆ ಸಲ್ಲಿಸಿ, ದವಸ ಧಾನ್ಯ, ಬೆಲ್ಲ ತಿನ್ನಿಸಿ ದೇವರ ಆಶೀರ್ವಾದ ಪಡೆದರು. ಶಾಸಕರಿಗೆ ಕಾರ್ಯಕರ್ತರು ಹಾಗೂ ಬೆಂಬಲಿಗರು ಸಾಥ್​ ನೀಡಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv