ಶಾಸಕ ಡಾ. ಅಜಯ್ ಬೆಂಬಲಿಗನಿಂದ ಧಮ್ಕಿ-ಶರಣಪ್ಪ ರೆಡ್ಡಿ

ಕಲಬುರ್ಗಿ: ವಿಧಾನಸಭೆ ಚುನಾವಣೆಯಲ್ಲಿ ನನಗೆ ಬೆಂಬಲ ನೀಡಿದರೆ, ಬಳಿಕ ನಿನಗೆ ಹಣ ನೀಡ್ತೇನೆ ಎಂದು ಹೇಳಿ ಡಾ. ಅಜಯ್ ಸಿಂಗ್ ನನಗೆ ವಂಚಿಸಿದ್ದಾರೆ ಎಂದು ಆರೋಪಿಸಿದ್ದ ಶರಣಪ್ಪ ರೆಡ್ಡಿಗೆ ಶಾಸಕನ ಬೆಂಬಲಿಗ ಜೀವ ಬೆದರಿಕೆ ಹಾಕಿದ ಆರೋಪ‌ ಕೇಳಿ ಬಂದಿದೆ.
ಜೇವರ್ಗಿ ಕಾಂಗ್ರೆಸ್ ಶಾಸಕ ಡಾ.ಅಜಯ್ ಸಿಂಗ್ ಸಾಬ್ ಅಭಿಮಾನಿಗಳ‌ ಸಂಘದ ರಾಜ್ಯಾಧ್ಯಕ್ಷ ಉದಯ ಪಾಟೀಲ್ ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ತನಗೆ ಜೀವ ಬೆದರಿಕೆ ಹಾಕಿದ್ದಾರೆ ಅಂತಾ ಶರಣಪ್ಪ ರೆಡ್ಡಿ ಆರೋಪಿಸಿದ್ದಾರೆ.
ಆದರೆ, ಈ ಕುರಿತು ಫಸ್ಟ್ ನ್ಯೂಸ್ ಗೆ ಪ್ರತಿಕ್ರಿಯಿಸಿರುವ ಉದಯ್ ಪಾಟೀಲ್, ಶರಣಪ್ಪ ರೆಡ್ಡಿ ಕೇವಲ ಪ್ರಚಾರಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾನೆ. ನಮ್ಮ ಶಾಸಕ ಡಾ.ಅಜಯ್ ಸಿಂಗ್ ವಿರುದ್ಧ ಏಕೆ ಆರೋಪ‌ ಮಾಡ್ತಿದ್ದಿಯಾ ಎಂದು ಪ್ರಶ್ನಿಸಿದ್ದೆ. ಆಗ ನನಗೆ ಉಲ್ಟಾ ರಫ್ ಆಗಿ ಮಾತನಾಡಲು ಶುರು ಮಾಡಿದ. ಮಾಧ್ಯಮಗಳ ಬಳಿ ಹೋಗಿ ಪ್ರಚಾರ ಪಡೆದು ಹಿರೋ ಆಗಲು‌ ಹೊರಟಿದ್ದಾನೆ. ಶರಣಪ್ಪ ರೆಡ್ಡಿ ಬಗ್ಗೆ ಜೇವರ್ಗಿ ತಾಲೂಕಿನ ಎಲ್ಲರಿಗೂ ಗೊತ್ತು ಅಂತಾ ಹೇಳಿದರು.
ಇದರ ವಿರುದ್ಧ ಫಸ್ಟ್ ನ್ಯೂಸ್ ಗೆ ಪ್ರತಿಕ್ರಿಯಿಸಿರುವ ಶರಣಪ್ಪ ರೆಡ್ಡಿ, ಕಳೆದ ವಿಧಾನಸಭೆ ಚುನಾವಣೆ ವೇಳೆ ನಾನು ಪಕ್ಷೇತರನಾಗಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದೆ. ಇದಕ್ಕೆ ಹಣ ಖರ್ಚು ಮಾಡಿ ಪ್ರಚಾರ ಸಹ ಮಾಡಿದ್ದೆ. ನಾನು ಚುನಾವಣೆಯಲ್ಲಿ ಖರ್ಚು ಮಾಡಿದ ಹಣ ನೀಡಿದ್ರೆ ಚುನಾವಣೆಯಲ್ಲಿ ಬೆಂಬಲಿಸುವುದಾಗಿ ಅಜಯ್ ಸಿಂಗ್ ರಿಗೆ ಹೇಳಿದ್ದೆ. ಅದಕ್ಕೆ ಅಜಯ್ ಸಿಂಗ್ ಸಹ ಒಪ್ಪಿದ್ದರು. ಈವಾಗ ಕೇಳಿದ್ರೆ ಹಣ ನೀಡದೆ ವಂಚಿಸುತ್ತಿದ್ದಾರೆ. ಪೊಲೀಸರ ಮೂಲಕ ಬೆದರಿಕೆಯೊಡ್ಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.