ಶಾಸಕರ ಗೆಲುವಿನ ಬಳಿಕ ಹರಕೆ ತೀರಿಸಿದ ಅಭಿಮಾನಿ

ಕೊಪ್ಪಳ: ಕನಕಗಿರಿಯಲ್ಲಿ ಬಸವರಾಜ್ ದಡೇಸುಗೂರ ಅವರು ಶಾಸಕರಾಗಲಿ ಎಂದು ಹರಕೆ ಹೊತ್ತಿದ್ದ ಅಭಿಮಾನಿಯೊಬ್ಬರು ಇದೀಗ ತಮ್ಮ ಹರಕೆ ತೀರಿಸಿದ್ದಾರೆ. ಗಂಗಾವತಿ ತಾಲೂಕಿನ ಶ್ರೀರಾಮಪೂರ ನಿವಾಸಿಯಾದ ಕೆ.ಶ್ರೀನಿವಾಸ್, ಬಸವರಾಜ್  ಅವರು ಚುನಾವಣೆಯಲ್ಲಿ ಗೆದ್ದರೆ ದೇವರಿಗೆ ಐದು ಕುರಿಗಳನ್ನು ಬಿಡುವುದಾಗಿ ಹರಕೆ ಮಾಡಿಕೊಂಡಿದ್ದರು.

ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೇಸೂಗುರ ಚುನಾವಣೆಯಲ್ಲಿ ಗೆದ್ದಿರುವುದರಿಂದ, ಶ್ರೀನಿವಾಸ್ ಇದೀಗ ತಾಯಮ್ಮ ದೇವಿಗೆ ಐದು ಕುರಿಗಳನ್ನ ಬಿಟ್ಟು ಹರಕೆ ತೀರಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv