ಹಳ್ಳಿವಾದ್ಯಕ್ಕೆ ‘ಸಿಟಿ’ ರವಿ ಭರ್ಜರಿ ಕುಣಿತ..!

ಚಿಕ್ಕಮಗಳೂರು : ಕಳೆದ ಮೂರು ದಿನಗಳಿಂದ‌ಸುಗ್ಗಿ ಹಬ್ಬದ ಸಂಭ್ರಮ ಜಿಲ್ಲೆಯಾದ್ಯಂತ ಮನೆ ಮಾಡಿದೆ. ನಗರದ ಇಂದಾವರದಲ್ಲಿ ಶಾಸಕ ಸಿ.ಟಿ.ರವಿ ಹಬ್ಬದ ನಿಮಿತ್ತ ನಿನ್ನೆ‌ಸಂಜೆ ಗ್ರಾಮಕ್ಕೆ ಭೇಟಿ ನೀಡಿದ್ದರು. ರಾಜಕೀಯ ಚಟುವಟಿಕೆಯ ಮಧ್ಯೆಯೂ ಸ್ಥಳಿಯರೊಂದಿಗೆ ಶಾಸಕ ರವಿ ಸಮಯ ಕಳೆದು, ಅವರೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ. ಅಷ್ಟೇ ಅಲ್ಲದೆ, ತಲೆಗೆ ಪೇಟ ಧರಿಸಿ, ಗ್ರಾಮಸ್ಥರೊಂದಿಗೆ ಸೇರಿ ಗ್ರಾಮೀಣ ಶೈಲಿಯಲ್ಲಿ ನುಡಿಸುವ ಹಳ್ಳಿ ವಾದ್ಯಕ್ಕೆ ತಕ್ಕಂತೆ‌ ಹೆಜ್ಜೆಹಾಕಿದ್ದು ವಿಶೇಷವಾಗಿತ್ತು. ಇನ್ನು ಇವರು ಸ್ಟೆಪ್ ಹಾಕುತ್ತಿದ್ದಂತೆ‌ಗ್ರಾಮದ ನೂರಾರು ಜನರು ಅವರನ್ನ ಸುತ್ತುವರೆದು ರವಿ ಅವರೊಂದಿಗೆ ಕುಣಿದು ಕುಪ್ಪಳಿಸಿದರು.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂರ್ಪಕಿಸಿ:contact@firstnews.tv