ಶಾಸಕ ಸಿ.ಟಿ. ರವಿ ಕಾರು ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

ತುಮಕೂರು: ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿ ಕಾರು ನಿಲ್ಲಿಸಿದ್ದ ಎರಡು ಕಾರುಗಳಿಗೆ ಬಿಜೆಪಿ ಶಾಸಕ ಸಿ.ಟಿ. ರವಿ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಕುಣಿಗಲ್​ ತಾಲೂಕಿನ ಆಲಪ್ಪನಗುಡ್ಡ ಬಳಿ ನಡೆದಿದೆ.

ಸೂರೇನಹಳ್ಳಿಯ ಶಶಿಕುಮಾರ್ (28) , ಸುನೀಲ್ ಗೌಡ (27) ಮೃತ ದುರ್ದೈವಿಗಳು. 2 ಕಾರಿನಲ್ಲಿ 13 ಮಂದಿ ಸ್ನೇಹಿತರು ಪ್ರವಾಸಕ್ಕೆ ತೆರಳಿದ್ದರು. ಶೃಂಗೇರಿ ಪ್ರವಾಸ ಮುಗಿಸಿ ಊರಿಗೆ ತೆರಳುತ್ತಿದ್ದರು. ಹೆದ್ದಾರಿ ಮಾರ್ಗ ಮಧ್ಯೆ ಮೂತ್ರ ವಿಸರ್ಜನೆಗೆಂದು ಕಾರು ನಿಲ್ಲಿಸಿದಾಗ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಅತೀ ವೇಗದಿಂದ ಬರುತ್ತಿದ್ದ ಶಾಸಕ ಸಿ.ಟಿ. ರವಿ ಅವರ ಫಾರ್ಚುನರ್ ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವನ ಕಾಲು ಮುರಿದಿದೆ. ಈ ವೇಳೆ ಸಿ.ಟಿ. ರವಿ ಸಹ ತಮ್ಮ ಕಾರಿನಲ್ಲಿದ್ದರು. ಶಾಸಕ ಸಿ.ಟಿ. ರವಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಬೆಂಗಳೂರಿನ ಆಸ್ಪತ್ರೆಗೆ ಅವರನ್ನ ದಾಖಲಿಸಲಾಗಿದೆ. ಇನ್ನು, ಘಟನಾ ಸ್ಥಳ ಮಹಜರ್ ಮಾಡದೇ ಮೃತದೇಹ‌ಗಳನ್ನು ದಿಢೀರ್ ಸಾಗಿಸಿದರೆಂದು ಮೃತರ ಸ್ನೇಹಿತರು ಆರೋಪಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv