ಕಾರು ಅಪಘಾತ: ಶಾಸಕ ಸಿ.ಟಿ. ರವಿ ವಿರುದ್ಧ ಎಫ್​ಐಆರ್​

ತುಮಕೂರು: ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಸಿ.ಟಿ. ರವಿ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ. ಇಂದು ಬೆಳಗ್ಗೆ ಕುಣಿಗಲ್​ ತಾಲೂಕಿನ ಆಲಪ್ಪನಗುಡ್ಡ ಬಳಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿ ನಿಲ್ಲಿಸಿದ್ದ ಎರಡು ಕಾರುಗಳಿಗೆ  ಸಿ.ಟಿ. ರವಿ ಅವರ ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಸೂರೇನಹಳ್ಳಿಯ ಶಶಿಕುಮಾರ್ (28) ಹಾಗೂ ಸುನೀಲ್ ಗೌಡ (27) ಮೃತ ದುರ್ದೈವಿಗಳು.

2 ಕಾರಿನಲ್ಲಿ 13 ಮಂದಿ ಸ್ನೇಹಿತರು ಶೃಂಗೇರಿ ಪ್ರವಾಸ ಮುಗಿಸಿ ಊರಿಗೆ ತೆರಳುತ್ತಿದ್ದರು. ಹೆದ್ದಾರಿ ಮಾರ್ಗ ಮಧ್ಯೆ ಮೂತ್ರ ವಿಸರ್ಜನೆಗೆಂದು ಕಾರು ನಿಲ್ಲಿಸಿದಾಗ ಚಿಕ್ಕಮಗಳೂರಿನಿಂದ ಬೆಂಗಳೂರು ಕಡೆಗೆ ವೇಗದಿಂದ ಬರುತ್ತಿದ್ದ ಶಾಸಕ ಸಿ.ಟಿ. ರವಿ ಅವರ ಫಾರ್ಚುನರ್ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲ್ಲದೆ ಓರ್ವ ವ್ಯಕ್ತಿಯ ಕಾಲು ಮುರಿದಿದೆ.

ಈ ಕುರಿತು ಸಿ.ಟಿ. ರವಿ ವಿರುದ್ಧ ಕುಣಿಗಲ್​ ಠಾಣೆಯಲ್ಲಿ ಐಪಿಸಿ ಸೆಕ್ಷನ್​​ 337, 279, 304 ಅಡಿ ಎಫ್‌ಐಆರ್ ದಾಖಲಾಗಿದೆ. ಸಿ.ಟಿ. ರವಿಗೆ ಜಾಮೀನು ಸಿಗುವಂತೆ ಸಾಮಾನ್ಯ ಕೇಸು ದಾಖಲಿಸಿರುವ ಪೊಲೀಸರ ನಡೆ ಅನುಮಾನ ಮೂಡಿಸಿದೆ. ಸಿ.ಟಿ.ರವಿ ಅವರನ್ನ ಬಚಾವ್ ಮಾಡಲು ಪೊಲೀಸರಿಗೆ ಒತ್ತಡ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv