ಸಿ.ಟಿ.ರವಿ ಕಾರು ಅಪಘಾತ: ರಾಜ್ಯ ಬಿಜೆಪಿ ಸ್ಪಷ್ಟನೆ

ಬೆಂಗಳೂರು: ಶಾಸಕ ಸಿ.ಟಿ.ರವಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಬಿಜೆಪಿ ಸ್ಪಷ್ಟನೆ ನೀಡಿದೆ. ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿರುವುದು ನೋವು ತಂದಿದೆ, ವಿಷಾದ ವ್ಯಕ್ತಪಡಿಸುತ್ತೇವೆ. ಕಾರು ಅಪಘಾತ ಆದ್ಮೇಲೆ ಸಿ.ಟಿ.ರವಿ ಸ್ಥಳದಲ್ಲೇ ಇದ್ದರು. ಮೃತದೇಹಗಳನ್ನ ಅಲ್ಲಿಂದ ಸ್ಥಳಾಂತರಿಸುವಾಗ, ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸುವಾಗ ಸಿ.ಟಿ.ರವಿ ಸ್ಥಳದಲ್ಲೇ ಇದ್ದರು ಎಂದು ಹೇಳಿದೆ.

ರವಿ ಕಾರು ಓಡಿಸುತ್ತಿರಲಿಲ್ಲ, ಅವರಿಗೆ ಕುಡಿಯುವ ಅಭ್ಯಾಸವೂ ಇಲ್ಲ. ಸಬ್​​ ಇನ್ಸ್​​ಪೆಕ್ಟರ್ ಅನುಮತಿ ಮೇರೆಗೆ ಸಿ.ಟಿ.ರವಿ ಸ್ಥಳದಿಂದ ಆಸ್ಪತ್ರೆಗೆ ತೆರಳಿದ್ದರು. ಘಟನೆಯಿಂದ ಅವರಿಗೆ ಎದೆ ನೋವಾಗಿತ್ತು, ಡಾಕ್ಟರ್ ಹತ್ರ ಹೋಗಿ ಚೆಕಪ್​​​​​ ಮಾಡಿಸಿ ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮುಂದಿನ ತನಿಖೆಗಾಗಿ ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ. ರವಿಗೆ ಸದ್ಯ ಸಣ್ಣ ಪ್ರಮಾಣದ ಎದೆನೋವಿದ್ದು, ವಿಶ್ರಾಂತಿಯಲ್ಲಿ ಇದ್ದಾರೆ ಎಂದು  ಪತ್ರಿಕಾ ಪ್ರಕಟಣೆ ಮೂಲಕ ಬಿಜೆಪಿ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: ಶಾಸಕ ಸಿ.ಟಿ. ರವಿ ಕಾರು ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು


Follow us on:

YouTube: firstNewsKannada Instagram: firstnews.tv Facebook: firstnews.tv Twitter: firstnews.tv