ವೋಟ್ ಮಾಡಿ ನಕ್ಸಲರಿಗೆ ಉತ್ತರ ಕೊಟ್ಟ ಹತ್ಯೆಗೀಡಾದ ಬಿಜೆಪಿ ಎಮ್​​​ಎಲ್​ಎ ಕುಟುಂಬ..!

ದಾಂತೆವಾಡ (ಛತ್ತೀಸ್​ಗಢ): ಕಳೆದ ಎರಡು ದಿನಗಳ ಹಿಂದಷ್ಟೇ ದಾಂತೆವಾಡದ ಕುವಾನಕೊಂಡದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದರು. ಭೀಕರ ಕೃತ್ಯದಿಂದಾಗಿ ಬಿಜೆಪಿ ಶಾಸಕ ಭೀಮಾ ಮಾಂಡವಿ ಹಾಗೂ ನಾಲ್ವರು ಭದ್ರತಾ ಸಿಬ್ಬಂದಿ ಸೇರಿ ಐವರು ಸಾವನ್ನಪ್ಪಿದ್ದರು. ಇಂದು ಛತ್ತೀಸ್​​ಗಢದಲ್ಲಿ ಲೋಕಸಭೆ ಚುನಾವಣೆ ನಡೀತಿದ್ದು, ನಕ್ಸಲರ ದಾಳಿಗೆ ಹತ್ಯೆಯಾದ ಎಂಎಲ್​ಎ ಭೀಮಾ ಮಾಂಡವಿ ಕುಟುಂಬ ಇಂದು ತಮ್ಮ ಹಕ್ಕನ್ನು ಚಲಾಯಿಸಿದರು.

ಬಸ್ತರ್​​ನಲ್ಲಿರುವ ಮತಗಟ್ಟೆಗೆ ದುಃಖದಲ್ಲಿಯೇ ಬಂದು ವೋಟಿಂಗ್ ಮಾಡಿದರು. ಶೋಕದಲ್ಲಿದ್ದರೂ ಕೂಡ ದೇಶದ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಿ ಮತಚಲಾಯಿಸಿ, ಮಾವೋವಾದಿಗಳಿಗೆ ದಿಟ್ಟ ಉತ್ತರ ಕೊಟ್ಟಿದ್ದಾರೆ. ಭೀಮಾ ಅವ್ರ ತಂದೆ ಲಿಂಗಾ ರಾಮ್, ತಾಯಿ, ಸಹೋದರಿ, ಪತ್ನಿ ಮತ್ತು ಕಿರಿಯ ಸಹೋದರ ಲಿಂಗಾ ಮತ್ತು ಸಂಜಯ್​ ವೋಟ್ ಚಲಾಯಿಸಿದರು. ಈ ವೇಳೆ ಮಾತನಾಡಿದ ಭೀಮಾ ಅವ್ರ ಪತ್ನಿ, ಓಜ್ವಶಿ, ನನ್ನ ಪತಿ ಯಾವಾಗಲೂ ಪ್ರಜಾಪ್ರಭುತ್ವಕ್ಕೆ ಗೌರವ ಕೊಡುತ್ತಿದ್ದರು. ನಕ್ಸಲ್​ ವಾದವನ್ನ ವಿರೋಧಿಸಿದ್ದರು. ಕೊನೆಗೂ ಪ್ರಜಾಪ್ರಭುತ್ವದ ಪರ ಹೋರಾಡುತ್ತಲೇ ತಮ್ಮ ಪ್ರಾಣ ತ್ಯಾಗ ಮಾಡಿದರು. ಅವ್ರ ಬಲಿದಾನವನ್ನ ವ್ಯರ್ಥವಾಗಿ ಬಿಡಲ್ಲ. ಮತದಾನದ ಮೂಲಕ ನಾವು ನಮ್ಮ ಸರ್ಕಾರವನ್ನ ಆಯ್ಕೆ ಮಾಡುತ್ತೇವೆ ಎಂದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv