ಅಂಗಡಿ ಜಾತಕ ಸ್ಟ್ರಾಂಗ್ ಇದೆ, ಸೋಲಿಸೋದು ಅಸಾಧ್ಯ -ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ: ಸುರೇಶ ಅಂಗಡಿ ಜಾತಕ ಅತ್ಯಂತ ಸ್ಟ್ರಾಂಗ್ ಇದೆ. ಅವರನ್ನು ಸೋಲಿಸೋದು ಅಸಾಧ್ಯವಾಗಿದೆ. ಈ ಬಗ್ಗೆ ನಾನೇ ಸುರೇಶ ಅಂಗಡಿ ಜಾತಕವನ್ನು ಜ್ಯೋತಿಷಿ ಬಳಿ ಪರಿಶೀಲನೆ ಮಾಡಿಸಿದ್ದೇನೆ ಅಂತಾ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಗೋಕಾಕ್ ತಾಲ್ಲೂಕಿನ ಕಲ್ಲೊಳ್ಳಿ ಗ್ರಾಮದಲ್ಲಿ
ಸುರೇಶ ಅಂಗಡಿ ಪರ ಪ್ರಚಾರ ವೇಳೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಸುರೇಶ ಅಂಗಡಿಗೆ ಗೋಕಾಕ್ ಹಾಗೂ ಅರಬಾವಿ ಕ್ಷೇತ್ರದಲ್ಲಿ ಹೆಚ್ಚು ಲೀಡ್ ಬರಲಿದೆ. ಅವರು ಸುಲಭವಾಗಿ ಗೆಲ್ಲಲ್ಲಿದ್ದಾರೆ. ಲೋಕಸಭಾ ಚುನಾವಣೆ ಮುಗಿದ ಬಳಿಕ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆ ಆಗಲಿದೆ ಅಂತಾ ಹೇಳಿದ್ರು. ಇದೇ ವೇಳೆ, ಸಚಿವ ಸತೀಶ್ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿ ಕಾಂಗ್ರೆಸ್ ಪರ ಕೆಲಸ ಮಾಡ್ತಿದ್ದಾರೆ ಎಂಬ ವಿಚಾರವಾಗಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದ್ರು ಪ್ರಚಾರ ಮಾಡಬಹುದು. ಕಾಂಗ್ರೆಸ್ ಪರ ಕೆಲಸ ಮಾಡುತ್ತಿದ್ದಾರೆ ಎಂದು ನಾನು ಕೇಳಿದ್ದೇನೆ ಅಂತಾ ಹೇಳಿದರು.