ಕಾರು ಅಪಘಾತ, ಕೂದಲೆಳೆ ಅಂತರದಲ್ಲಿ ಪಾರಾದ ಶಾಸಕ

ಹಾಸನ: ಬೆಂಗಳೂರಿನ ಪುಲಕೇಶಿನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಾರು ಅಪಘಾತಕ್ಕೀಡಾಗಿದೆ. ಹಾಸನದ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ಘಟನೆ ನಡೆದಿದ್ದು ಶಾಸಕರು ಕೂದಲೆಳೆಯಂತರದಲ್ಲಿ ಪಾರಾಗಿದ್ದಾರೆ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕುಟುಂಬ ಸಮೇತ ಧರ್ಮಸ್ಥಳಕ್ಕೆ ಹೋಗಿ, ವಾಪಾಸ್​ ಬರುವಾಗ ಶಾಸಕರ ಇನ್ನೋವಾ ಕಾರಿಗೆ ಸ್ವಿಫ್ಟ್ ಕಾರೊಂದು ಗುದ್ದಿದೆ. ಸದ್ಯ ಅಪಘಾತದಲ್ಲಿ ಯಾರಿಗೂ ತೊಂದರೆಯಾಗಿಲ್ಲ. ಈ ಸಂಬಂಧ ಹಾಸನ ನಗರ ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv