ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಎ.ಟಿ.ರಾಮಸ್ವಾಮಿ

ಬೆಂಗಳೂರು: ಇಂದಿನ ವಿಧಾನಸಭೆಯ ಕಲಾಪದಲ್ಲಿ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪೌರಕಾರ್ಮಿಕರ ಸಂಖ್ಯೆಯಲ್ಲಿ ಅಧಿಕಾರಿಗಳು ಖೊಟ್ಟಿ ದಾಖಲೆ ಸೃಷ್ಟಿಸಿ ಹಣ ನುಂಗುತ್ತಿದ್ದಾರೆ. ಹೀಗಾದ್ರೆ ಅದಕ್ಕೆ ಆಡಳಿತ ಅಂತಾರಾ? ಆಡಳಿತದಲ್ಲಿ ದಕ್ಷತೆ ಮತ್ತು ಪರಿಶುದ್ಧತೆ ಈಗ ಉಳಿದಿಲ್ಲ ಎಂದರು.
ಅಲ್ಲದೇ, ಸರಕಾರಕ್ಕೆ ಸಂಪನ್ಮೂಲ ಕ್ರೂಢೀಕರಣ ಬಹಳ ಮುಖ್ಯ. ಸರಕಾರ ಖೊಟ್ಟಿ ಬಿಲ್​ಗಳಿಗೆ ಕಡಿವಾಣ ಹಾಕಬೇಕು. ಬಿಬಿಎಂಪಿ ಅಧಿಕಾರಿಗಳು ಸತ್ತಿದ್ದಾರಾ ಬದುಕಿದ್ದಾರಾ? ಬಹುತೇಕ ಅಧಿಕಾರಿಗಳು ತಮ್ಮ ಹೊಣೆಗಾರಿಕೆ ಮರೆತಿದ್ದಾರೆ ಎಂದರು.
ಇನ್ನು, ಕೆಲವು ಅಧಿಕಾರಿಗಳು ಆತ್ಮಸಾಕ್ಷಿಯನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಅಧಿಕಾರಿಗಳಿಗೆ ವಿಪರೀತ ದುರಾಸೆ ಇದೆ. ಈ ದುರಾಸೆಗೆ ಕಡಿವಾಣ ಹಾಕಿದರೆ ಜನರ ಕಲ್ಯಾಣ ಸಾಧ್ಯ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv