ಕಾಂಗ್ರೆಸ್‌ ಶಾಸಕರ ‘ಮಿಕ್ಸಿ’ ರಾಜಕಾರಣ..!

ಚಿಕ್ಕಬಳ್ಳಾಪುರ: ಕಾಂಗ್ರೆಸ್‌ ಶಾಸಕ ಡಾ.ಕೆ. ಸುಧಾಕರ್‌ ಮಹಿಳಾ ಮತದಾರರನ್ನು ಸೆಳೆಯಲು ಭರ್ಜರಿ ಪ್ಲಾನ್‌ ರೂಪಿಸಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಹಿಳೆಯರಿಗೆ ಬಂಪರ್‌ ಗಿಫ್ಟ್‌ ಹಂಚುವ ಮೂಲಕ ಮಹಿಳಾ ಮಣಿಗಳ ಓಲೈಕೆಗೆ ಮುಂದಾಗಿದ್ದಾರೆ. ಡಾ.ಕೆ. ಸುಧಾಕರ್‌ ಸಂಕ್ರಾಂತಿ ಹಬ್ಬದಂದು ತಾಲೂಕಿನಾದ್ಯಂತ ರಂಗೋಲಿ ಸ್ಪರ್ಧೆಯನ್ನು ಆಯೋಜನೆ ಮಾಡಿದ್ದರು.ಇದೀಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ಮಹಿಳೆಯರಿಗೆ ಮಿಕ್ಸಿ ಹಂಚಲಾಗಿದೆ. ಸೋಮವಾರ ಮುದ್ದೇನೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗೃಹಿಣಿಯರಿಗೆ ಡಾ. ಸುಧಾಕರ್‌ ಬೆಂಬಲಿಗರು ಮಿಕ್ಸಿ ವಿತರಣೆ ಮಾಡಿದ್ದಾರೆ. ಗ್ರಾಮಪಂಚಾಯತಿ ಎದುರಲ್ಲೇ ಮಿಕ್ಸಿ ಹಂಚಿಕೆ ಕಾರ್ಯ ನಡೆಯಿತು. ಮಹಿಳೆಯರೂ ನಾ ಮುಂದೂ ತಾ ಮುಂದು ಎಂದು ಸರತಿ ಸಾಲಿನಲ್ಲಿ ನಿಂತು ಮಿಕ್ಸಿಗಳನ್ನ ಕೊಂಡೊಯ್ದರು.

ಕಳೆದ ಬಾರಿಯ ಚುನಾವಣೆಗೂ ಮೊದಲು ಕೂಡ ಮಹಿಳಾ ಮತದಾರರಿಗೆ ಕುಕ್ಕರ್ ಹಂಚಿಕೆ ಮಾಡಲಾಗಿತ್ತು. ಇದಲ್ಲದೆ ಸಂಕ್ರಾಂತಿ ಸುಗ್ಗಿ ಸಾಂಸ್ಕೃತಿಕ ವೇದಿಕೆ ಕಾರ್ಯಕ್ರಮದ ಆಹ್ವಾನ ನೆಪದಲ್ಲಿ ಕ್ಷೇತ್ರದ ಲಕ್ಷಾಂತರ ಮಂದಿ ಮಹಿಳೆಯರಿಗೆ ಉಚಿತ ಸೀರೆ ಕೂಡ ಉಡಗೊರೆಯಾಗಿ ಕೊಟ್ಟಿದ್ದರು. ಇದೀಗ ಮಿಕ್ಸಿ ಹಂಚಿಕೆ ಮಾಡಿದ್ದು, ಮತದಾರರನ್ನ ಓಲೈಸೋಕೆ ಶಾಸಕರು ಈ ರೀತಿ ಮಾಡಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿವೆ.

Leave a Reply

Your email address will not be published. Required fields are marked *