ಯಾರದ್ದೋ ಹೆಸರು, ಅಬ್ದುಲ್ ಕಲಾಂ ಫೋಟೋ, ಚುನಾವಣೆ ಅಧಿಕಾರಿಗಳಿಂದ ಮತ್ತೆ ಯಡವಟ್ಟು..!

ಕೋಲಾರ: ಚುನಾವಣೆ ಹತ್ತಿರ ಬಂದಂತೆ ಹಲವು ಕುತೂಹಲಕರ ಸಂಗತಿಗಳು ಬಯಲಿಗೆ ಬರ್ತಾ ಇವೆ. ಅದ್ರಲ್ಲೂ ಈ ಚುನಾವಣಾಧಿಕಾರಿಗಳು ಕೆಲ ಕಡೆ ಮಾಡುವ ಯಡವಟ್ಟುಗಳು ನಗೆಪಾಟಲಿಗೆ ಈಡು ಮಾಡಿಬಿಡ್ತವೆ. ಅಂಥದ್ದೇ ಮತ್ತೊಂದು ಘಟನೆ ಈಗ ಕೋಲಾರದಲ್ಲಿ ನಡೆದಿದ್ದು, ಸಾರ್ವಜನಿಕರಲ್ಲಿ ಆಕ್ರೋಶವನ್ನು ಉಂಟುಮಾಡಿದೆ.
ಅಬ್ದುಲ್ ಕಲಾಂ ಫೋಟೋ
ದೇಶ ಕಂಡ ಅತ್ಯುನ್ನತ ವಿಜ್ಞಾನಿಗಳಲ್ಲಿ ಒಬ್ಬರೆಂದು ಖ್ಯಾತಿ ಪಡೆದಿದ್ದ ದಿವಂಗತ ಅಬ್ದುಲ್​ ಕಲಾಂ ಅವರ ಫೋಟೊವೊಂದು ವೋಟರ್ಸ್​ ಲಿಸ್ಟ್​ನಲ್ಲಿ ಕಾಣಿಸಿಕೊಂಡಿದೆ. ಅಷ್ಟಕ್ಕೂ ಆಗಿದ್ದೇನು ಅಂದ್ರೆ, ಕೋಲಾರ ಜಿಲ್ಲೆ ಮುಳಬಾಗಿಲು ನಗರದ ವಾರ್ಡ್ ನಂ. 7 ರಲ್ಲಿ, ರಮೇಶ್ ಎಂಬುವವರ ಗುರುತಿನ ಚೀಟಿಯಲ್ಲಿ, ದಿವಂಗತ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರ ಭಾವಚಿತ್ರ ಮುದ್ರಣವಾಗಿರುವುದು ಪತ್ತೆಯಾಗಿದೆ. ಕೈಗೆ ಬಂದ ಗುರುತಿನ ಚೀಟಿಯಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಫೋಟೋ ಕಂಡು ಶಾಕ್ ಆದ ರಮೇಶ್ ಈ ಸಂಬಂಧ ಚುನಾವಣಾ ಅಧಿಕಾರಿಗಳಿಗೆ ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಜಿಲ್ಲಾ ಚುನಾವಣಾ ಅಧಿಕಾರಿಗಳು ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv