ಕೈ ತಪ್ಪಿದ ಸಚಿವ ಸ್ಥಾನ, ಪುರಸಭೆ ಸದಸ್ಯರ ರಾಜೀನಾಮೆ

ಕೊಪ್ಪಳ: ಮೈತ್ರಿ ಸರ್ಕಾರದ ಸಚಿವ ಸಂಪುಟದಲ್ಲಿ ಕುಷ್ಟಗಿ ಶಾಸಕನಿಗೆ ಕೈ ತಪ್ಪಿದ ಸಚಿವ ಸ್ಥಾನ ಹಿನ್ನೆಲೆಯಲ್ಲಿ ಕುಷ್ಟಗಿಯ ಪುರಸಭೆ ಸದಸ್ಯರು ರಾಜಿನಾಮೆ ನೀಡಿದ್ದಾರೆ. ಜಿಲ್ಲೆಯ ಕುಷ್ಟಗಿ ಕ್ಷೇತ್ರದ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪೂರಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಕುಷ್ಟಗಿಯ 6 ಜನ ಪುರಸಭೆ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಹಿರಿಯ ಮತ್ತು ನಿಷ್ಠಾವಂತ ರಾಜಕಾರಣಿಗೆ ಮೈತ್ರಿ ಸರ್ಕಾರ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಪುರಸಭೆ ಸದಸ್ಯರಾದ ಮಂಜುಳಾ ಪರುಶುರಾಮ, ಉದಯಾನಂದ ಬಸಪ್ಪ, ಚಂದ್ರಶೇಖರ ಮರಿಯಪ್ಪ, ಸಂತೋಷ ಗುರುಸಿದ್ದಯ್ಯ, ಮಹೇಶ ಜೋಗುನಗೌಡ, ಫಾತೀಮಾ ಹುಸೇನಸಾಬ್ ರಾಜಿನಾಮೆ ಪತ್ರವನ್ನು ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರಗೆ ಕಳುಹಿಸಿದ್ದಾರೆ.

 

 

 

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv