ಅನುಚಿತ ವರ್ತನೆ; ಯುವಕನ ಕಪಾಳಕ್ಕೆ ಬಾರಿಸಿದ್ರು ಖುಷ್ಬೂ..!

ಬೆಂಗಳೂರು: ಪ್ರಚಾರದ ವೇಳೆ ನಟಿ, ಎಐಸಿಸಿ ವಕ್ತಾರೆ ಖುಷ್ಬೂ ಯುವಕನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಇಂದು ನಗರಕ್ಕೆ ಆಗಮಿಸಿದ್ದ ಖುಷ್ಬೂ ಬೆಂ. ಸೆಂಟ್ರಲ್​ ಕ್ಷೇತ್ರ ಮೈತ್ರಿ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರಪ್ರಚಾರ ಮಾಡಿದ್ರು. ಇಂದಿರಾನಗದ ಹೊಯ್ಸಳನಗರದಲ್ಲಿ ಮೈತ್ರಿ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಪ್ರಚಾರ ಱಲಿ ನಡೆಸಿದ್ರು. ಈ ವೇಳೆ ಯುವಕನೊಬ್ಬ ಖುಷ್ಬೂ ಅವರ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಇದ್ರಿಂದ ಸಿಟ್ಟಿಗೆದ್ದ ಖುಷ್ಬೂ ಟಕ್ಕನೆ ತಿರುಗಿ ಯುವಕನ ಕೆನ್ನೆಗೆ ಬಾರಿಸಿದ್ರು. ತಕ್ಷಣ ಮಧ್ಯೆ ಬಂದ ಪೊಲೀಸರು ಕೂಡಾ ಯುವಕನಿಗೆ ಹೊಡೆದು ವಶಕ್ಕೆ ಪಡೆದಿದ್ದಾರೆ.