ಪಟ್ಟನಾಯಕನಹಳ್ಳಿ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದ ಸಣ್ಣ ಕೈಗಾರಿಕಾ ಸಚಿವ ಶ್ರೀನಿವಾಸ್​

ತುಮಕೂರು: ಸಣ್ಣ ಕೈಗಾರಿಕಾ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನೆಲ್ಲೆ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಶ್ರೀಕ್ಷೇತ್ರಕ್ಕೆ ಸಚಿವ ಎಸ್​.ಆರ್​​. ಶ್ರೀನಿವಾಸ್​​ ಭೇಟಿ ನೀಡಿದರು.
ಮಠದಲ್ಲಿ ಕಾಯಕಯೋಗಿ ಶ್ರೀನಂಜಾವಧೂತ ಸ್ವಾಮೀಜಿಗಳ ಆಶೀರ್ವಾದವನ್ನು ಪಡೆದು ಮಾತುಕತೆ ನಡೆಸಿದರು.

ಸಣ್ಣ ಕೈಗಾರಿಕಾ ಸಚಿವನಾಗಿ ನಿರುದ್ಯೋಗ ವಿದ್ಯಾವಂತ ಯುವಕರಿಗೆ ಸಣ್ಣ ಕೈಗಾರಿಕೆಯಲ್ಲಿ ತೊಡುಗಿಕೊಳ್ಳುವಂತೆ ಮಾಡುತ್ತೇನೆ. ಸಣ್ಣ ಕೈಗಾರಿಕೆಯಲ್ಲಿ ಉತ್ತಮ ಕೆಲಸ ಮಾಡುವ ಅವಕಾಶ ಸಿಕ್ಕಿದೆ ಎಂದು ಸಚಿವ ಎಸ್​.ಆರ್​. ಶ್ರೀನಿವಾಸ್​ ಭರವಸೆ ನೀಡಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv