ಎಂ.ಬಿ.ಪಾಟೀಲ್‌ನಂತವರು ಏನೇ ಮಾಡಿದ್ರೂ ನಡೆಯೋದಿಲ್ಲ: ಸಚಿವ ವೆಂಕಟರಮಣಪ್ಪ ಟಾಂಗ್‌

ತುಮಕೂರು: ಸಿದ್ಧಗಂಗಾ ಮಠಕ್ಕೆ ಕಾರ್ಮಿಕ ಸಚಿವ ವೆಂಕಟರಮಣಪ್ಪ ಭೇಟಿ ನೀಡಿ, ಹಳೇ ಮಠದಲ್ಲಿ ಶ್ರೀಗಳ ಆಶೀರ್ವಾದ ಪಡೆದರು.
ಶ್ರೀಗಳ ಭೇಟಿ ಬಳಿಕ ಮಾತನಾಡಿದ ಅವರು, ಎಂ.ಬಿ ಪಾಟೀಲರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡುವ ಪ್ರಶ್ನೆಯೇ ಇಲ್ಲ. ಇಂತ ಎಂ.ಬಿ.ಪಾಟೀಲ್ ನಂತವರು ಏನೇ ಮಾಡಿದ್ರು ಸರ್ಕಾರಕ್ಕೆ ತೊಂದರೆ ಆಗೋದಿಲ್ಲ. ಸರ್ಕಾರ 5 ವರ್ಷ ಸುಭದ್ರವಾಗಿರುತ್ತೆ ಎಂದು ಟಾಂಗ್ ಕೊಟ್ಟರು.

ಮಾಜಿ ಸಿಎಂ ಸಿದ್ದರಾಮಯ್ಯ ಮೂಲೆಗುಂಪಾಗಿಲ್ಲ. ಅವರೂ ನಮ್ಮ ನಾಯಕರೇ ಎಂದ ಕಾರ್ಮಿಕ ಸಚಿವರು, ಕಾರ್ಮಿಕ ಖಾತೆ ಸಿಕ್ಕಿರುವುದು ನನಗೆ ತೃಪ್ತಿ ತಂದಿದೆ. ಬಡವರಿಗೆ ಸಹಾಯ ಮಾಡುವ ಖಾತೆ ಇದಾಗಿದ್ದು, ಹಾಗಾಗಿ ತೃಪ್ತಿ ನೀಡಿದೆ ಎಂದು ಹೇಳಿದರು. ಅಭಿವೃದ್ಧಿ ಎಂಬುದು ಖಾತೆಯಿಂದ ಮಾತ್ರವಲ್ಲ ಶಾಸಕನಾಗಿಯೂ ಮಾಡಬಹುದು. ಬರಪೀಡಿತ ಪಾವಗಡಕ್ಕೆ ಕುಡಿಯುವ ನೀರಿಗೆ ಆದ್ಯತೆ ನೀಡಲಾಗುವುದು. ಸಣ್ಣ ಕೈಗಾರಿಕೆಗಳು ಹಾಗೂ ಗಾರ್ಮೆಂಟ್ಸ್ ಸ್ಥಾಪಿಸಿ ಉದ್ಯೋಗ ಕೊಡ್ತೇವೆ ಅಂತ ಸಚಿವರು ಭರವಸೆ ನೀಡಿದ್ರು.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv