‘ಬಿಎಸ್​ವೈ ಸರ್ಕಾರ ಉರುಳಿಸಲು ಹೋಗಿ ಸಿಕ್ಕಿ ಹಾಕಿಕೊಳ್ತಿದ್ದಾರೆ’

ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಾವು ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಅಂತ ನಾನಾ ಕಸರತ್ತು ಮಾಡ್ತಿದ್ದಾರೆ. ಮತ್ತು ಸರ್ಕಾರ ಉರುಳಿಸಲು ಹೋಗಿ ತಾವೇ ಸಿಕ್ಕಿ ಹಾಕಿಕೊಳ್ತಾರೆ, ಆಮೇಲೆ ಮತ್ತೆ ಬೇಲ್​ಗಾಗಿ ಕೋರ್ಟ್ ಮೊರೆ ಹೋಗ್ತಾರೆ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ವ್ಯಂಗ್ಯವಾಡಿದ್ದಾರೆ.
ದಾವಣಗೆರೆಯಲ್ಲಿ ಇಎಸ್ಐ ಆಸ್ಪತ್ರೆ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ವೆಂಕಟರಮಣಪ್ಪ, ಬಿಜೆಪಿಯವರು ದಿನ ಬೆಳಗಾದ್ರೆ ಸರ್ಕಾರ ಅಸ್ಥಿರಗೊಳಿಸಲು ಪ್ಲಾನ್​ ಮಾಡುತ್ತಿದ್ದಾರೆ. ತಾವು ಕೆಲ್ಸಾ ಮಾಡ್ತೀವಾ ಇಲ್ವಾ ಎಂಬುದನ್ನಾದ್ರು ಬಿಜೆಪಿ ನೋಡಲಿ, ನಮ್ಮ ಸರ್ಕಾರ ಸುಭದ್ರವಾಗಿದೆ ಎಂದು ಹೇಳಿದರು.