ದೇವಿ ಚಾಮುಂಡೇಶ್ವರಿ ದರ್ಶನ ಪಡೆದ ಸಚಿವ ವೆಂಕಟರಾವ್ ನಾಡಗೌಡ

ಮೈಸೂರು: ಸಿಂಧನೂರು ಕ್ಷೇತ್ರದ ಶಾಸಕ, ಹಾಗೂ ಮೈತ್ರಿ ಸರ್ಕಾರದ ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಕುಟುಂಬ ಸಮೇತರಾಗಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿ ಚಾಮುಂಡೇಶ್ವರಿಯ ದರ್ಶನ ಪಡೆದ್ರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವನಾದ ನಂತರ ಪ್ರಥಮ ಬಾರಿಗೆ ದೇವಿಯ ದರ್ಶನ ಮಾಡಲು ಬಂದಿದ್ದೇನೆ. ಸಂಪುಟದಲ್ಲಿ ನನಗೆ ಕೊಟ್ಟಿರುವ ಖಾತೆ ಬಗ್ಗೆ ತೃಪ್ತಿ ಇದೆ ಅಂತಾ ಹೇಳಿದ್ರು. ಇನ್ನು, ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಈ ಸಮ್ಮಿಶ್ರ ಸರ್ಕಾರಕ್ಕೆ ಎಂ ಬಿ ಪಾಟೀಲ್ ರಿಂದ ಯಾವುದೇ ತೊಂದರೆ ಇಲ್ಲ ಅಂತಾ ಸ್ಪಷ್ಟಪಡಿಸಿದ್ರು. ಇನ್ನೆರಡು-ಮೂರು ದಿನಗಳಲ್ಲಿ ನಮ್ಮ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಮುಂದಿನ ಕೆಲಸಗಳನ್ನ ಕೈಗೊಳ್ಳುತ್ತೇನೆ ಅಂತಾ ಹೇಳಿದ್ರು. ರೈತರ ಸಾಲ ಮನ್ನ ವಿಚಾರವಾಗಿ ಮಾತನಾಡಿ, ಪ್ರತಿ ಪಕ್ಷ ಗಡುವು ನೀಡುವುದು ಸರಿಯಲ್ಲ. ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಈ ರೀತಿ ಮಾತನಾಡುವುದು ಶೋಭೆ ತರಲ್ಲ ಅಂತಾ ಬಿಎಸ್​ವೈಗೆ ಟಾಂಗ್​ ನೀಡಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv