ತಮಿಳುನಾಡಿಗೆ 9.19 TMC ನೀರು; ನೂತನ ಸಂಸದರು ನೋಡ್ಕೋತಾರೆ -ಸಾ.ರಾ.ಮಹೇಶ್

ಮೈಸೂರು: ಕಾವೇರಿ ನಾಲೆಯಿಂದ ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡುವ ವಿಚಾರವನ್ನು ನೂತನವಾಗಿ ಆಯ್ಕೆಯಾಗಿರುವ ಸಂಸದರು ನೋಡಿಕೊಳ್ಳುತ್ತಾರೆ ಅಂತಾ ಸಚಿವ ಸಾರಾ ಮಹೇಶ್​ ಹೇಳಿದ್ದಾರೆ.

ತಮಿಳುನಾಡಿಗೆ ನೀರು ಬಿಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯದಿಂದ 24 ಸಂಸದರು ಆಯ್ಕೆಯಾಗಿದ್ದಾರೆ. ಅದ್ರಲ್ಲಿ ಹಲವು ಹಿರಿಯರಿದ್ದಾರೆ. ಈ ಬಗ್ಗೆ ಬರುವ ಕಾನೂನಾತ್ಮಕ ತೊಡಕುಗಳನ್ನ ಅವರು ಬಗೆಹರಿಸುತ್ತಾರೆ. ನಾನು ಈ ರಾಜ್ಯದ ಪ್ರಜೆಯಾಗಿ ನೀರು ಬಿಡುಲು ಸಾಧ್ಯವಿಲ್ಲ ಎನ್ನುತ್ತೇನೆ ಅಷ್ಟೇ. ಅಲ್ಲದೇ, ನಮ್ಮಲ್ಲೇ ಬರ ಇದೆ. ಧರ್ಮಸ್ಥಳದಲ್ಲೇ ನೀರಿಲ್ಲ. ಹೀಗಿರುವಾಗ ನೀರು ಬಿಡ ಕೂಡದು ಅಂತಾ ಸಾ.ರಾ.ಮಹೇಶ್ ಹೇಳಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv