ಸಿಲ್ಕ್ ಪಂಚೆ, ಶರ್ಟ್‌, ಮೈಸೂರು ಪೇಟ ಧರಿಸಿ ಮಿನಿಸ್ಟ್ರು ಮಿಂಚಿಂಗ್‌!

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈಗ ನಾಡಹಬ್ಬ ದಸರಾದ ಸಂಭ್ರಮ. ನಿನ್ನೆ ದಸರಾವನ್ನು ಸಾಂಪ್ರದಾಯಿಕವಾಗಿ ಉದ್ಘಾಟಿಸಲಾಗಿದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಎರಡನೇ ದಿನವಾದ ಇಂದು ಸಹ ನಗರದಲ್ಲಿ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಇಂದು ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್​ ಪಾರಂಪರಿಕ ಉಡುಗೆ ತೊಟ್ಟು ಮಿಂಚಿದರು. ಸಿಲ್ಕ್ ಪಂಚೆ, ಮೈಸೂರು ಪೇಟ ಹಾಗೂ ಶರ್ಟ್‌ ಧರಿಸಿ ಬಂದಿದ್ದ ಅವರು ಪಾರಂಪರಿಕ ನಡಿಗೆಗೆ ಚಾಲನೆ ನೀಡಿದರು. ಈ ವೇಳೆ ಶಾಸಕ ಎಲ್. ನಾಗೇಂದ್ರ ಸಾಥ್​​ ನೀಡಿದರು. ಇನ್ನು ಈ ಕಾರ್ಯಕ್ರಮದಲ್ಲಿ ಎಲ್ಲಾ ವಯೋಮಾನದವರು ಮೈಸೂರು ಪೇಟ, ಸಿಲ್ಕ್ ಪಂಚೆ, ಸೀರೆ ತೊಟ್ಟು‌ ಮಿಂಚಿದರು. ಈ ನಡಿಗೆ ಪುರಭವನದಿಂದ ಪ್ರಾರಂಭವಾಗಿ, ಪ್ರಮುಖ ರಸ್ತೆಗಳಲ್ಲಿ ಕೆ.ಆರ್.ವೃತ್ತ, ಕೆ.ಆರ್.ಆಸ್ಪತ್ರೆ ಸೇರಿದಂತೆ ಪ್ರಮುಖ ಪಾರಂಪರಿಕ ಕಟ್ಟಡಗಳ‌ ಮಾರ್ಗದಿಂದ ಸಂಚರಿಸಿತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv