‘ಶ್ರೀಗಳಿಗೆ ಭಾರತ ರತ್ನ ಕೊಡಬೇಕು ಅನ್ನೋದು ಜನರ ಅಪೇಕ್ಷೆ’

ದಾವಣಗೆರೆ: ಸಿದ್ದಗಂಗಾ ಶ್ರೀಗಳಿಗೆ‌ ಭಾರತ ರತ್ನ ಪ್ರಶಸ್ತಿ ಸಿಗದೇ ಇರೋದು ದೇಶದ ದೌರ್ಭಾಗ್ಯ. ಸ್ವಾಮೀಜಿಗಳಿಗೆ ಭಾರತ ರತ್ನ ಕೊಡಬೇಕು ಅನ್ನೋದು ರಾಜ್ಯ, ರಾಷ್ಟ್ರದ ಜನರ ಅಪೇಕ್ಷೆಯಾಗಿತ್ತು ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಅನ್ನ, ವಿದ್ಯೆ, ವಸತಿ ಕೊಟ್ಟ ದೇವರು ಸಿದ್ದಗಂಗಾ ಶ್ರೀಗಳು. ನಿರಂತರವಾಗಿ ಅನ್ನ ದಾಸೋಹ ಮಾಡಿಕೊಂಡು ಬಂದಿದ್ದಾರೆ. ಅವ್ರಿಗೆ ಭಾರತ ರತ್ನ ಕೊಡಬೇಕು ಅಂತ ರಾಜ್ಯ ಸರ್ಕಾರವು ಒತ್ತಾಯ ಮಾಡಿತ್ತು. ಆದ್ರೆ, ಕೇಂದ್ರ ಸರ್ಕಾರ ರಾಜ್ಯದ ಮನವಿಯನ್ನ‌ ಪುರಸ್ಕರಿಸಿಲ್ಲ. ಕೇಂದ್ರ ಸರ್ಕಾರ‌ ಈಗಲಾದ್ರೂ ಶ್ರೀಗಳಿಗೆ ಭಾರತ ರತ್ನ ಕೊಡಲಿ ಎಂದು ಎಸ್.ಆರ್.ಶ್ರೀನಿವಾಸ್ ಹೇಳಿದರು.

ಇದನ್ನೂ ಓದಿ:‘ಕಾಂಗ್ರೆಸ್​ ಶಾಸಕರು ಬಿಜೆಪಿ ಒತ್ತಾಯಕ್ಕೆ ಅಷ್ಟು ಸುಲಭ ಮಣಿಯಲ್ಲ’

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv