‘ಕುಮಾರಸ್ವಾಮಿಗೆ ಬೆಂಬಲ‌ ನೀಡೋದಾಗಿ ಮಹೇಶ್​ ಅವರೇ ಹೇಳಿದ್ದಾರೆ’

ಹಾಸನ: ಶಿಕ್ಷಣ ಸಚಿವ ಮಹೇಶ್ ರಾಜಿನಾಮೆ‌ ಬಗ್ಗೆ ನನಗೆ ಮಾಹಿತಿಯಿಲ್ಲ. ಕುಮಾರಸ್ವಾಮಿಗೆ ಬೆಂಬಲ‌ ನೀಡೋದಾಗಿ ಅವರೇ ಹೇಳಿದ್ದಾರೆ. ಆದ್ದರಿಂದ ಯಾರೂ ಆತಂಕಪಡೋ ಅವಶ್ಯಕತೆ ಇಲ್ಲ. ಬೆಂಗಳೂರಿಗೆ ಹೋಗಿ ಮಾಹಿತಿ ತಿಳಿದು ಹೇಳುತ್ತೇನೆ ಅಂತಾ ಲೋಕಪಯೋಗಿ ಸಚಿವ ರೇವಣ್ಣ ಹೇಳಿದ್ದಾರೆ.

ಜಿ.ಪಂ ಸಭೆ ಬಳಿಕ ಮಾತನಾಡಿದ ಅವರು, ಅವರ ರಾಜೀನಾಮೆ ಅವರ ಪಕ್ಷದ ತೀರ್ಮಾನ ಇರಬಹುದು. ಅವರು ನೀಡೋ ರಾಜಿನಾಮೆಯನ್ನ ಸಿಎಂ ಅಂಗೀಕರಿಸ್ತಾರೊ ಅಥವಾ ಮಾಯಾವತಿಯವರ ಜೊತೆ ಮಾತನಾಡುತ್ತಾರೊ ಎನೋ ಗೊತ್ತಿಲ್ಲ ಅಂತಾ ಹೇಳಿದರು.

ಇದೇ ವೇಳೆ, ಮಹೇಶ್​ ಮೊದಲಬಾರಿ‌ ಗೆದ್ದು ಸಚಿವರಾಗಿದ್ದರು ಅವರೊಬ್ಬ ಒಳ್ಳೆ ರಾಜಕಾರಣಿ. ರಾಜಿನಾಮೆ ಹಿಂಪಡೆದು ಮುಂದುವರೆಯಿರಿ ಎಂದು ನಾವು ಮನವಿ ಮಾಡುತ್ತೇವೆ ಅಂತಾ ಸಚಿವ ರೇವಣ್ಣ ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv