ಚಲುವರಾಯಸ್ವಾಮಿ ವಿರುದ್ಧ ಮತ್ತೆ ಪುಟ್ಟರಾಜು ಸೆಡ್ಡು, ಈ ಬಾರಿ ಸವಾಲು ಏನು..?!

ಮಂಡ್ಯ: ಕಳೆದ ಕೆಲ ದಿನಗಳಿಂದ ಮಾಜಿ ಶಾಸಕ ಚಲುವರಾಯಸ್ವಾಮಿ, ಸಚಿವ ಪುಟ್ಟರಾಜು ವಾಕ್ಸಮರ ಯಾಕೋ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ದಿನೇ ದಿನೇ ಈ ಇಬ್ಬರು ನಾಯಕರ ವಾಕ್ಸಮರ ತಾರಕ್ಕೇರುತ್ತಿದ್ದು, ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲೇ ಕಾಲ ಕಳೆಯುತ್ತಿದ್ದಾರೆ.

ಚಲುವರಾಯಸ್ವಾಮಿಯನ್ನು ಡೆಡ್​ಹಾರ್ಸ್ ಎಂದು ಜರಿದಿದ್ದ, ಸಚಿವ ಪುಟ್ಟರಾಜು ಇದೀಗ ಅವರನ್ನ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ. ಜಿಲ್ಲಾ ಪಂಚಾಯ್ತಿ ಹಾಲ್​ನಲ್ಲಿ ಯಾರು, ಯಾರ ಕಾಲು ಹಿಡಿದುಕೊಂಡ್ರು ಅನ್ನೋದಕ್ಕೆ ಮಾಜಿ ಶಾಸಕ ಹೆಚ್‌. ಬಿ ರಾಮು ಅವರೆ ಸಾಕ್ಷಿ, ಬೇಕಿದ್ರೆ ಅವ್ರ ನೇತೃತ್ವದಲ್ಲಿ ಚರ್ಚೆ ನಡೆಯಲಿ. ನಾನು ಚಲುವರಾಯಸ್ವಾಮಿ ಸ್ನೇಹಿತರು. ರಾಜಕೀಯ ವಿಚಾರದಲ್ಲಿ ಅವ್ರು ನನಗೆ ಏನ್ ತೊಂದ್ರೆ ಕೊಟ್ರು, ನಾನು ಅವ್ರ ಬಗ್ಗೆ ಏನ್ ಮಾತನಾಡಿದ್ದೇನೆ ಅನ್ನೋದ್ರ ಬಗ್ಗೆ ಚರ್ಚೆಗೆ ನಾನು ರೆಡಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ.

ಚಲುವರಾಯಸ್ವಾಮಿ ಅವರನ್ನ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷನನ್ನಾಗಿ ಮಾಡಿ ರಾಜಕೀಯ ಶಕ್ತಿ ತುಂಬುತ್ತಾ ಬಂದವರು ಯಾರು ಅನ್ನೋದರ ಬಗ್ಗೆ ಮಂಡ್ಯದಲ್ಲಿ ದೊಡ್ಡ ವೇದಿಕೆ ಹಾಕಿ ಬಹಿರಂಗ ಚರ್ಚೆ ಮಾಡಲು ನಾನು ರೆಡಿ. ನಾನು ಯಾವುದೋ ಕಾಟ್‌ಪೋಟಿಗಳಿಗೆ ಉತ್ತರ ಕೊಡುವ ಅಗತ್ಯ ಇಲ್ಲ ಎಂದು ಮತ್ತೆ ಚೆಲುವರಾಯ ಸ್ವಾಮಿಗೆ ಟಾಂಗ್​ ನೀಡಿದ್ದಾರೆ.

ಇವತ್ತಿನ ರಾಜಕೀಯ ವ್ಯವಸ್ಥೆಯಲ್ಲಿ ಗೆದ್ದವನು ಸೋತ, ಸೋತವನು ಸತ್ತ ಅನ್ನುವ ರೀತಿ ನಾವೆಲ್ಲ ರಾಜಕಾರಣ ಮಾಡಬೇಕಾಗಿದೆ. ಆ ಅರ್ಥದಲ್ಲಿ ಡೆಡ್​ಹಾರ್ಸ್ ಪದ ಬಳಸಿದೆ ಅಷ್ಟೇ ಎಂದು ತಮ್ಮ ಡೆಡ್​ಹಾರ್ಸ್​ ಹೇಳಿಗೆ ಪುಟ್ಟರಾಜು ಸಮರ್ಥನೆ ನೀಡಿದ್ರು.
ಜನ 52 ಸಾವಿರ ಮತಗಳ ಅಂತರದಲ್ಲಿ ಜನ ನನ್ನನ್ನು ಆಯ್ಕೆ ಮಾಡಿ, ಚೆಲುವರಾಯ ಸ್ವಾಮಿಗೆ ನೀನು ಸುಮ್ಮನಿರಪ್ಪ ಅಂತ ಹೇಳಿದ್ದಾರೆ. ಹೀಗಾಗಿ ನಾನು ಆ ರೀತಿ ಹೇಳಿಕೆ ನೀಡಿದೆ ಅಷ್ಟೇ.. ಅವರಿಗೆ ಅಗೌರವ ತರುವ ಉದ್ದೇಶದಿಂದ ಹಾಗೆ ಹೇಳಿಲ್ಲ ಎಂದು ಹೇಳಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv