‘ವಿ ಆರ್ ಲೂಸಿಂಗ್ ಕ್ರೆಡಿಬಿಲಿಟಿ’.. ಸಚಿವ ಪ್ರಿಯಾಂಕ್ ಖರ್ಗೆ

ಕಲಬುರ್ಗಿ: ವಿಪಕ್ಷಗಳಿಗೆ ಜನರ ಬಗ್ಗೆಯೂ ಕಾಳಜಿ ಇಲ್ಲ, ಸಂವಿಧಾನದ ಬಗ್ಗೆಯೂ ಕಾಳಜಿ‌ ಇಲ್ಲ, ಯಾವುದೇ ಚರ್ಚೆ ಇಲ್ಲದೇ ಬಜೆಟ್ ಪಾಸ್ ಆಗಲು ಆಪರೇಷನ್ ಕಮಲವೇ ಕಾರಣ ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಜನಕ್ಕೆ ನಾವು ಸ್ಫೂರ್ತಿಯಾಗಿದ್ದೇವಾ? ಎಂಬುದನ್ನು ಪ್ರಶ್ನೆ ಮಾಡಬೇಕಾಗುತ್ತೆ. ಚರ್ಚೆ ಇಲ್ಲದೆಯೇ ಬಜೆಟ್ ಪಾಸ್ ಆಗಿದ್ದಕ್ಕೆ ನಾಚಿಕೆಯಾಗುತ್ತದೆ. ವಿ ಆರ್ ಲೂಸಿಂಗ್ ಕ್ರೆಡಿಬಿಲಿಟಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಅತೃಪ್ತ ಕಾಂಗ್ರೆಸ್ ಶಾಸಕರನ್ನು‌ ಅನರ್ಹ ಮಾಡೋದು ಸ್ಪೀಕರ್‌ಗೆ ಬಿಟ್ಟ ವಿಚಾರ. ಡಾ.ಉಮೇಶ್ ಜಾಧವ್ ಸಂವಿಧಾನಾತ್ಮಕವಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದರೆ ಸ್ವಾಗತವಿದೆ ಎಂದರು. ಇನ್ನ, ಬಿಜೆಪಿಯಿಂದ ಲೋಕಸಭೆಗೆ ಡಾ.ಉಮೇಶ್ ಜಾಧವ್ ಸ್ಪರ್ಧಿಸಲು ಚಿಂತಿಸಿದ್ದಾರಂತಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿದ್ದು, ಯಾವುದೇ ಪಕ್ಷದಿಂದಲೂ ಸ್ಪರ್ಧಿಸಲು ಸಿದ್ಧ ಎಂದು ಹೇಳೋದು ತಪ್ಪು. ಬಜೆಟ್‌ನಲ್ಲಿ ಚಿಂಚೋಳಿ ಕ್ಷೇತ್ರಕ್ಕೆ ಯೋಜನೆ ಘೋಷಿಸುವ ಬಗ್ಗೆ ಆ ಕ್ಷೇತ್ರದ ಶಾಸಕರಿಂದಾಗಲಿ, ನನ್ನಿಂದಾಗಲಿ ಯಾವುದೇ ಪ್ರಸ್ತಾಪ ಹೋಗಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv