‘ಧೃತರಾಷ್ಟ್ರ, ದುರ್ಯೋಧನ ಕಾಂಗ್ರೆಸ್​ನಲ್ಲಿದ್ದರೇ ಶಕುನಿ ಬಿಜೆಪಿಯಲ್ಲಿದ್ದಾನೆ’

ಕಲಬುರ್ಗಿ: ಸಮ್ಮಿಶ್ರ ಸರ್ಕಾರ ಟೇಕ್​ ಆಫ್​ ಆಗಿಲ್ಲ, ಟೇಕ್​ ಆಫ್​ ಆಗಿಲ್ಲ ಎಂದು ಬಿಜೆಪಿ ಅವರು ಹೇಳುತ್ತಾರೆ. ಇದು ಟೇಕ್​ ಆಗಲು ಇದೇನು ವಿಮಾನನಾ? ಎಂದು ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್​ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪುತ್ರ, ಸಚಿವ ಪ್ರಿಯಾಂಕ್ ಖರ್ಗೆ ಗುಡುಗಿದ್ದಾರೆ.

ಅಫಜಲಪುರದಲ್ಲಿ ಮಾತನಾಡಿದ ಅವರು, ಬಿಜೆಪಿ ಅವರು ಸಮ್ಮಿಶ್ರ ಸರ್ಕಾರ ಟೇಕ್​ ಆಗಿಲ್ಲ ಎಂದು ಹೇಳುತ್ತಾರೆ. ಆದರೆ ಬಿಜೆಪಿ ನಾಯಕರು ಮತ್ತು ಪ್ರಧಾನಿ ನರೇಂದ್ರ ಮೋದಿ ಕೇವಲ ಘೋಷಣೆ ಮಾಡುತ್ತಾರೆ ಕೆಲಸ ಮಾಡಲ್ಲ ಎಂದು ಕುಟುಕಿದರು.

ಅಲ್ಲದೇ, ಮಲ್ಲಿಕಾರ್ಜುನ ಖರ್ಗೆ ಧೃತರಾಷ್ಟ್ರ, ಪ್ರಿಯಾಂಕ್​ ಖರ್ಗೆ ದುರ್ಯೋಧನ ಎಂದು ಮಾಲೀಕಯ್ಯ ಗುತ್ತೇದಾರ್​ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್​ ಖರ್ಗೆ, ಧಿಮಾಕಿನಿಂದ ಬಂದ್ರೆ ಜನ ಏನು ತೀರ್ಪು ಕೊಡುತ್ತಾರೆ ಎಂಬುದನ್ನು ನೀವು ನೋಡಿದ್ದೀರಿ. ಬಿಜೆಪಿ ಅವರೇ ದಯವಿಟ್ಟು ತಿಳಿದುಕೊಳ್ಳಿ. ಮಾಲೀಕಯ್ಯನನ್ನು ಇಟ್ಟುಕೊಂಡು ನೀವು ಮತ ಪರಿವರ್ತನೆ ಮಾಡ್ತೀರಿ ಅಂತಾ ಭಾವಿಸಿದ್ದೀರಿ ಅನಿಸುತ್ತೆ. ಮಾಲಿಕಯ್ಯ ಅವರು ಮಲ್ಲಿಕಾರ್ಜುನ ಖರ್ಗೆ ಧೃತರಾಷ್ಟ್ರ, ಪ್ರಿಯಾಂಕ್​ ಖರ್ಗೆ ದುರ್ಯೋಧನ ಅಂತಾ ಹೇಳುತ್ತಿರಬಹುದು. ಆದರೆ ಶಕುನಿ ಮಾಮಾ ನಿಮ್ಮ ಬಳಿಯೇ ಇದ್ದಾನೆ ಎಂದು ಮಾಲೀಕಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

 ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv